ಬೆಂಗಳೂರು, ಮಾ.17-ಆಟೋವನ್ನು ಹಿಂಬಾಲಿಸಿ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಪ್ರಯಾಣಿಕರೊಬ್ಬರ ಕೈಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸದಾಶಿವನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದ ಮಂಜುನಾಥ ನಗರದ ನಿವಾಸಿ ಉತ್ತಮ್ ಮೊಬೈಲ್ ಕಳೆದುಕೊಂಡವರು.
ರಾತ್ರಿ 10.45ರ ಸಮಯದಲ್ಲಿ ಉತ್ತಮ್ ಆಟೋದಲ್ಲಿ ಮತ್ತೊಬ್ಬರೊಂದಿಗೆ ರಾಜಾಜಿನಗರಕ್ಕೆ ಹೋಗುತ್ತಿದ್ದರು. ಆಟೋ ಸಿ.ವಿ.ರಾಮನ್ ರಸ್ತೆಯ ಸಂದೀಪ್ ಮೋಟಾರ್ಸ್ ಬಳಿಯ ಸಿಗ್ನಲ್ ಬಳಿ ಆಟೋ ನಿಂತಿದ್ದಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಉತ್ತಮ್ ಕೈಲಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಸದಾಶಿವನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.