ಲಿಸ್ಬನ್, ಮಾ.17-ಇದು ಜಗತ್ತಿನ ಅತ್ಯಂತ ದುಬಾರಿ ಚಾಕೋಲೆಟ್. ಇದರ ಬೆಲೆ 9,489 ಡಾಲರ್ಗಳು (6.17,496 ರೂ.ಗಳು)..! ಪೆÇೀರ್ಚುಗಲ್ ರಾಜಧಾನಿ ಲಿಸ್ಬನ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಾಕೋಲೆಟ್ ಮತ್ತು ಮಿಠಾಯಿ ಮೇಳದಲ್ಲಿ ಈ ಚಾಕೋಲೆಟ್ ಎಲ್ಲರ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವಾಗಿದೆ.
ಖಾದ್ಯ ಚಿನ್ನದಿಂದ ಈ ಚಾಕೋಲೆಟ್ನನ್ನು ತಯಾರಿಸಲಾಗಿದೆ. ಮಡಗಾಸ್ಕರ್ನ ಅತ್ಯಂತ ಬೆಲೆ ಬಾಳುವ ಕೇಸರಿ ಎಳೆಗಳು, ಶ್ವೇತ ಮೃದು ಮಿಠಾಯಿ ಮತ್ತು ಬಂಗಾರದ ತೆಳು ಪದರವನ್ನು ಇದು ಹೊಂದಿದೆ. ಇದರ ಪೆಟ್ಟಿಗೆಯೂ ಆತ್ಯಾಕರ್ಷಕ. ಕಿರೀಟ ಆಕಾರದ ಬಾಕ್ಸ್ನಲ್ಲಿ 5,500 ಬೆಲೆಬಾಳುವ ಸೂಕ್ಷ್ಮ ಸ್ಫಟಿಕ ಹರಳುಗಳೂ ಇರುತ್ತವೆ.
ಈ ಚಾಕೋಲೆಟ್ ನೋಡಲು ವಸ್ತುಪ್ರದಶನದಲ್ಲಿ ಜನರು ಮುಗಿ ಬೀಳುತ್ತಿದ್ದು, ಇದರ ರಕ್ಷಣೆಗಾಗಿ ಇಬ್ಬರು ಶಸ್ತ್ರಸಜ್ಜಿತ ಗಾರ್ಡ್ಗಳನ್ನು ನಿಯೋಜಿಸಲಾಗಿದೆ.
ಪೆÇೀರ್ಚ್ಗೀಸ್ನ ಪ್ರಸಿದ್ಧ ಚಾಕೋಲೆಟ್ ತಯಾರಕ ಡೇನಿಯಲ್ ಗೋಮ್ಸ್ ಇದರ ಸೃಷ್ಟಿಕರ್ತ. ವಜ್ರಾಕಾರದ ಇದು ವಿಶ್ವದ ಅತ್ಯಂತ ದುಬಾರಿ ಚಾಕೋಲೆಟ್ ಎಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಪಡೆದಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.