ಬೆಂಗಳೂರು: ಮಾ-17: ಡಿಸೆಂಬರ್ 16ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಕರಾಳ ನೆನಪು ಇನ್ನೂ ಹಾಗೇ ಇದೆ. ಕಾಮುಕರಿಂದ ಭೀಕರವಾಗಿ ಅತ್ಯಾಚಾರಕ್ಕೀಡಾಗಿ, ಸಾವನ್ನಪ್ಪಿದ ನಿರ್ಭಯಾ ಮತ್ತು ಆಕೆಯ ತಾಯಿಯ ಅಂದವನ್ನು ವರ್ಣಿಸಿ ನಿವೃತ್ತ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ಈಗ ವಿವಾದಕ್ಕೀಡಾಗಿದ್ದಾರೆ.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದ ಮಹಿಳಾ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ನಿರ್ಭಯಾ ತಾಯಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಾಂಗ್ಲಿಯಾನ ನಿರ್ಭಯಾ ತಾಯಿ ಇಲ್ಲಿಗೆ ಬಂದಿದ್ದು. ನಮ್ಮ ಜತೆ ಮಾತನಾಡಿದ್ದು ತುಂಬಾ ಸಂತಸ ತಂದಿದೆ. ನಿರ್ಭಯ ತಾಯಿ ಇಷ್ಟು ಚೆನ್ನಾಗಿದ್ದರೆ, ಇನ್ನು ನಿರ್ಭಯಾ ಇನ್ನೆಷ್ಟು ಚೆಂದ ಇರಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಯಾರಾದರೂ ದೌರ್ಜನ್ಯ ಮಾಡಲ ಬಂದರೆ ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರೆ. ಸುಮ್ಮನೆ ಅವರಿಗೆ ಶರಣಾಗುವುದು ಒಳ್ಳೆಯದ್ದು ಆಗ ಕೊಲೆಯಾಗುವುದನ್ನಾದರೂ ತಪ್ಪಿಸಬಹುದು ಎಂದು ಹೇಳಿದರು.
ತಮ್ಮ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಸಮರ್ಥಿಕೊಂಡಿರುವ ಸಾಂಗ್ಲಿಯಾನ, ಯಾವುದೇ ಕೆಟ್ಟ ಉದ್ದೇಶದಿಂದ ನಾನು ಈ ರೀತಿ ಹೇಳಲಿಲ್ಲ. ಯಾರಾದರೂ ನನ್ನ ಹತ್ತಿರ ಬಂದು ನೀವು ಎಷ್ಟು ಚೆನ್ನಾಗಿದ್ದೀರಾ. ಇನ್ನು 40 ವರ್ಷದ ವ್ಯಕ್ತಿಯಂತೆ ಕಾಣಿಸುತ್ತೀರಾ ಎಂದು ಹೇಳಿದರೆ ನನಗೆ ಸಂತೋಷವಾಗತ್ತದೆ. ಅದೇ ಅರ್ಥದಲ್ಲಿ ನಾನು ಅವರಿಗೂ ಹೇಳಿದ್ದು ಒಬ್ಬ ವ್ಯಕ್ತಿಯ ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.