ಭೋಪಾಲ್:ಮಾ-17: ಸಮುದ್ರದ ನೀರನ್ನು ಶುದ್ಧೀಕರಿಸಿ ಶೀಘ್ರದಲ್ಲಿಯೇ ಲೀಟರ್ಗೆ 5 ಪೈಸೆಯಂತೆ ಕುಡಿಯುವ ನೀರು ನೀಡಲಾಗುತ್ತದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬಂದ್ರಾಭನ್ನಲ್ಲಿ ಎರಡು ದಿನಗಳ ನದಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ತಮಿಳುನಾಡಿನ ಟುಟಿಕಾರಿನ್ನಲ್ಲಿ ಈಗಾಗಲೆ ಸಮುದ್ರ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಪ್ರಯೋಗ ನಡೆಯುತ್ತಿದೆ ಎಂದಿದ್ದಾರೆ.
ನದಿ ನೀರಿಗಾಗಿ ರಾಜ್ಯಗಳು ಕಿತ್ತಾಡುತ್ತಿವೆ ಆದರೆ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಬಗ್ಗೆ ಮಾತ್ರ ಯಾರಿಗೂ ಕಾಳಜಿ ಇಲ್ಲ. ಆರು ನದಿಗಳನ್ನು ಪಾಕಿಸ್ತಾನದ ಜತೆಗೆ ಭಾರತ ಹಂಚಿಕೊಂಡಿದೆ ಎಂದಿದ್ದಾರೆ.
‘ಮೂರು ನದಿಗಳಿಂದ ಪಾಕಿಸ್ತಾನಕ್ಕೆ ನೀರು ಹರಿಯುತ್ತಿದೆ. ಈ ಬಗ್ಗೆ ಯಾವುದೇ ಸುದ್ದಿ ಪತ್ರಿಕೆ ಬರೆದಿಲ್ಲ, ಇದನ್ನು ನಿಲ್ಲಿಸುವಂತೆ ಯಾರೊಬ್ಬ ಶಾಸಕರೂ ಬಾಯ್ಬಿಟ್ಟು ಕೇಳುತ್ತಿಲ್ಲ’ ಎಂದು ಗಡ್ಕರಿ ಗುಡಿಗಿದ್ದಾರೆ.