ಬೆಂಗಳೂರು:ಮಾ-16: ತೀವ್ರ ಚರ್ಚೆ ಹುಟ್ಟುಹಾಕಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಹೆಚ್ ಸಿ ಮಹದೇವಪ್ಪ, ವಿವಾದಾತ್ಮಕ ಟ್ವೀಟ್ ಮಾಡಿದ್ದು ನಾನಲ್ಲ, ಯಾರೋ ಹ್ಯಾಕ್ ಮಾಡಿ ಟ್ವೀಟ್ ಮಾಡಿದ್ದಾರೆ ಎಂದು ಈಗಾಗಲೇ ವೀರಪ್ಪ ಮೊಯ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೂ ಈ ಟ್ವೀಟ್ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ. ಟಿಕೆಟ್ ಫೈನಲ್ ಮಾಡೋದು ಹೈಕಮಾಂಡ್. ಉಳಿದಿರೋದನ್ನ ಮೊಯ್ಲಿ ಬಳಿ ಕೇಳಿ. ನನಗೆ ಅವರಿಗೆ ಯಾವುದೇ ಸಂಬಂಧ ಇಲ್ಲ. ನಾನು ಖುಷಿಯಾಗಿ ಇದ್ದೇನೆ. ಮತ್ತೆ ಮತ್ತೆ ಯಾಕೆ ಕೇಳಿದ್ದನ್ನೆ ಕೇಳ್ತಿರಾ ಎಂದು ಏರು ಧ್ವನಿಯಲ್ಲಿ, ಅಸಮಾಧಾನದ ಮೂಲಕವೇ ಪ್ರತಿಕ್ರಿಯೆ ನೀಡಿದರು.
ಮೊಯ್ಲಿ ಕಾಂಗ್ರೆಸ್ನ ಹಿರಿಯ ನಾಯಕ. ಚುನಾವಣೆ ವೇಳೆ ಇಂತಹ ಕೆಲಸವನ್ನು ನಮ್ಮ ವಿರೋಧಿಗಳು ಮಾಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.