ನವದೆಹಲಿ:ಮಾ-17: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ತಮ್ಮ ಹಾಗೂ ಪತ್ನಿ ಹಸೀನ್ ಜಹಾನ್ ರ ಸಂಬಂಧ ಮುಗಿದ ಅಧ್ಯಾಯ ಎಂದಿದ್ದಾರೆ.
ಪತ್ನಿ ಹಸೀನ್ ತಮ್ಮ ವಿರುದ್ಧ ಕಿರುಕುಳ, ಕೊಲೆ ಯತ್ನ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದು, ಈ ಕುರಿತ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸತ್ಯ ಹೊರಬರಬೇಕು ಎಂದು ಶಮಿ ಆಗ್ರಹಿಸಿದ್ದಾರೆ.
ನನ್ನ ಕುಟುಂಬದವರೆಲ್ಲಾ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಪ್ರಯತ್ನಿಸಿದ್ದರು. ಆದರೆ ಹಸೀನ್ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾಳೆ ಎಂದರು. ತನಿಖೆ ಸರಿಯಾಗಿ ನಡೆದರೆ, ಆಕೆಯ ಆರೋಪಗಳೆಲ್ಲಾ ಸುಳ್ಳು ಎನ್ನುವುದು ಬಯಲಾಗಲಿದೆ. ಡಿಸೆಂಬರ್ 7ರಂದು ಭುವನೇಶ್ವರ್ ಮದುವೆಗೆ ಒಟ್ಟಿಗೆ ಹೋಗಿದ್ದೇವೆ. ಆಕೆಗೆ 18 ಲಕ್ಷ ಮೌಲ್ಯದ ಒಡವೆ ತೆಗೆದುಕೊಟ್ಟ ರಸೀದಿ ನನ್ನ ಬಳಿ ಇದೆ ಎಂದು ಶಮಿ ಹೇಳಿದ್ದಾರೆ.
ಹಸೀನ್ ಜಹಾನ್ ನನ್ನ ಅಣ್ಣನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ. ಅದು ಸಹ ಸುಳ್ಳು ಎಂದು ಸಾಬೀತು ಪಡಿಸಲು ನನ್ನ ಬಳಿ ಸಾಕ್ಷ್ಯವಿದೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.