ಬೆಂಗಳೂರು, ಮಾ.17-ಅತಿವೇಗವಾಗಿ ಬಂದ ವಾಹನವೊಂದು ಕಾನ್ಸ್ಟೆಬಲ್ವೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರ ಸಂಚಾರಿ ಠಾಣೆಯ ಕಾನ್ಸ್ಟೆಬಲ್ ರವಿಶಂಕರ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ಇಂದು ಮಧ್ಯಾಹ್ನ 12.45 ರ ಸಮಯದಲ್ಲಿ ರವಿಶಂಕರ್ ಹೊಸಕೆರೆ ಹಳ್ಳಿ ಬಳಿಯ ನೈಸ್ರಸ್ತೆ ಜಂಕ್ಷನ್ ಸಮೀಪ ಹೋಗುತ್ತಿದ್ದಾಗ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಕಮೀಷನರ್ ಹಿತೇಂದ್ರ ಅವರು ತಿಳಿಸಿದ್ದಾರೆ.
ಅಪಘಾತ ಮಾಡಿದ ಚಾಲಕ ವಾಹನ ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿದ್ದಾನೆ. ರವಿಶಂಕರ್ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.