ಬೀಜಿಂಗ್, ಮಾ.17-ಚೀನಾ ನಾಯಕ ಕ್ಷಿ-ಪಿಂಗ್ ಅವರು ರಾಷ್ಟ್ರಾಧ್ಯಕ್ಷರಾಗಿ ಎರಡನೇ ಅವಧಿಗೆ ಐದು ವರ್ಷಗಳ ಕಾಲ ಪುನರಾಯ್ಕೆ ಆಗಿದ್ದಾರೆ. ಅವರ ಪರಮಾಪ್ತ ವಾಂಗ್ ಕ್ವಿಶಾನ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಎರಡು ಅವಧಿ ಅಳ್ವಿಕೆ ರದ್ದುಗೊಳಿಸಿ, ಜೀವಿತಾವಧಿಗೆ ಕ್ಸಿ ಅವರು ದೇಶದ ಅಧ್ಯಕ್ಷರಾಗಲು ಕಳೆದ ವಾರ ಚೀನಾ ಸಂಸತ್ ಅವಕಾಶ ನೀಡಿತ್ತು. ಇದರ ಬೆನ್ನಲ್ಲೆ ಔಪಚಾರಿಕವಾಗಿ 64 ವರ್ಷದ ಅವರನ್ನು ಅಧ್ಯಕ್ಷರಾಗಿ ಹಾಗೂ 69 ವರ್ಷದ ವಾಂಗ್ರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇಪ್ಪತ್ತು ಲಕ್ಷ ಯೋದರನ್ನು ಒಳಗೊಂಡ ವಿಶ್ವದ ಅತಿದೊಡ್ಡ ಸೇನೆಯ ಅತ್ಯುನ್ನತ ಹೈ ಕಮಾಂಡ್ ಆಗಿರುವ ಸೆಂಟ್ರಲ್ ಮಿಲಿಟರಿ ಕಮಿಷನ್(ಸಿಎಂಸಿ)ನ ಮುಖ್ಯಸ್ಥರಾಗಿಯೂ ಕ್ಷಿ ಜಿನ್ಪಿಂಗ್ ಚುನಾಯಿತರಾಗಿದ್ದಾರೆ.