ಬೆಂಗಳೂರು, ಮಾ.17-ವಿಕ್ರಂ ಇನ್ವೆಸ್ಟ್ಮೆಂಟ್ ಕಂಪನಿಯ ವಂಚನೆ ಪ್ರಕರಣದಲ್ಲಿ ಸುಮಾರು 1800ಕ್ಕೂ ಹೆಚ್ಚು ಮಂದಿ 360 ಕೋಟಿಯಿಂದ 400 ಕೋಟಿಯಷ್ಟು ಹಣ ಹೂಡಿಕೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಸುತ್ತಿರುವ ಮೂರು ತಂಡಗಳು ಹಲವು ವಿಷಯಗಳನ್ನು ಸಂಗ್ರಹಿಸಿವೆ. ಆರೋಪಿಗಳು ಹೂಡಿಕೆದಾರರಿಂದ ಹಣ ಕಟ್ಟಿಸಿಕೊಂಡು ರಾಜ್ಯದಲ್ಲಷ್ಟೇ ಅಲ್ಲದೆ, ಹೊರ ರಾಜ್ಯಗಳಲ್ಲೂ ತೊಡಗಿಸಿರುವ ಬಗ್ಗೆ ಮಾಹಿತಿ ಇದೆ.
ತನಿಖೆ ಪೂರ್ಣಗೊಂಡ ನಂತರ ಆರೋಪಿಗಳು ಎಷ್ಟು ಮಂದಿಯಿಂದ ಎಷ್ಟು ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆಂಬ ಸಂಪೂರ್ಣ ಅಂಕಿಅಂಶ ದೊರೆಯಲಿದೆ ಎಂದರು.
ಪ್ರಮುಖ ಆರೋಪಿಯಾದ ರಾಘವೇಂದ್ರ ಶ್ರೀನಾಥ್ ಪೆÇಲೀಸ್ ಕಸ್ಟಡಿ ಅವಧಿ ಮುಗಿಯಲಿದ್ದು, ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಇನ್ನಿತರ ಆರೋಪಿಗಳಾದ ಸೂತ್ರಂಸುರೇಶ್,ï ನಾಗರಾಜ್, ಪ್ರಹ್ಲಾದ್ ಮತ್ತು ನರಸಿಂಹಮೂರ್ತಿ ಅವರುಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಶರಣಪ್ಪ ಅವರು ತಿಳಿಸಿದರು.
ಈ ಕಂಪನಿಯ ಮೋಸದ ಬಗ್ಗೆ ದೂರುಗಳಿದ್ದಲ್ಲಿ ದಾಖಲಿಸಲು ಸಾರ್ವಜನಿಕರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಸಾರ್ವಜನಿಕರು ಹಣ ತೊಡಗಿಸಿ ಮೋಸ ಹೋಗಿದ್ದಲ್ಲಿ ಕೂಡಲೇ ಬನಶಂಕರಿ ಠಾಣೆಗೆ ದೂರು ನೀಡುವಂತೆ ತಿಳಿಸಿದರು.