ನವದೆಹಲಿ: ಮಾ-17: ಜಗತ್ತಿನ ಯಾವ ಶಕ್ತಿಯೂ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಹಾಗೆಯೇ ದೇಶದ ಪ್ರಾದೇಶಿಕ ಸಮಗ್ರತೆಯ ರಕ್ಷಣೆಗಾಗಿ ನಮ್ಮ ಸೇನಾಪಡೆಗಳು ಗಡಿದಾಟಲು ಹಿಂಜರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರ ಎಂದೆಂದಿಗೂ ನಮ್ಮದೆ, ಯಾರೂ ಅದನ್ನು ನಮ್ಮಿಂದ ಕಸಿದುಕೊಲ್ಳಲಾಗದು. ನಾವು ದೇಶದ ಆಂತರಿಕ ಭದ್ರತೆಯನ್ನು ಮಾತ್ರವೇ ಪರಿಗಣಿಸುವುದಿಲ್ಲ, ದೇಶದ ಪ್ರಾದೇಶಿಕ ಸಮಗ್ರತೆ ರಕ್ಷಣೆಗಾಗಿ ಅಗತ್ಯ ಬಿದ್ದರೆ ಗಡಿ ದಾಟಿಯೂ ಯುದ್ಧ ಹೂಡುತ್ತೇವೆ ಎಂದರು.
ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಉತ್ಸುಕವಾಗಿದೆ, ಇದಕ್ಕಾಗಿ ಯಾರೊಂದಿಗೂ ಮಾತನಾಡಲು ನಾವು ಸಿದ್ದರಿದ್ದೇವೆ ಎಂದ ರಾಜನಾಥ್ ಸಿಂಗ್, ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥರಾದ ದಿನೇಶ್ವರ್ ಶರ್ಮ ಅವರ ಮುಖಂಡತ್ವದಲ್ಲಿ ಕಾಶ್ಮೀರ ಸಮಸ್ಯೆ ಕುರಿತಂತೆ ಎಲ್ಲ ವಿಭಾಗಗಳಿಂದ ಜನರೊಡನೆ ಮುಕ್ತವಾಗಿ ಚರ್ಚೆ ನಡೆಸಲಾಗುತ್ತದೆ. ಕಾಶ್ಮೀರದ ಮಕ್ಕಳು ನಮ್ಮ ಮಕ್ಕಳಂತೆಯೇ ಭಾವಿಸಿದ್ದೇವೆ. ಯಾರೇ ಆಗಲಿ ಅವರನ್ನು ಉಗ್ರಗಾಮಿ ಕಾರ್ಯಾಚರಣೆಗೆ ತೊಡಗಿಸಿಕೊಳ್ಳುವುದನ್ನು ನಾವು ಸಹಿಸಲಾರೆವು ಎಂದು ಹೇಳಿದರು.
ಕಾಶ್ಮೀರಿ ಯುವಕರಿಗೆ ಉಗ್ರವಾದ, ಜಿಹಾದ್ ತರಬೇತಿಗಳನ್ನು ನೀಡುವ ಯಾರೇ ಆದರೂ ಇಸ್ಲಾಂನಲ್ಲಿನ ಜಿಹಾದ್ ಪರಿಕಲ್ಪನೆಗಳ ಬಗೆಗೆ ಮೊದಲು ಅರಿತುಕೊಳ್ಳಬೇಕಿದೆ. ಕಾಶ್ಮೀರದಲ್ಲಿ ಪ್ರಥಮ ಬಾರಿಗೆ ಕಲ್ಲು ತೂರಾಟ ನಡೆಸುವ ಯುವಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ನಾನು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರಿಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ.
2018 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರವು ಕಲ್ಲು ತೂರಾಟದಲ್ಲಿ ಭಾಗವಹಿಸಿದ್ದ 9,730 ಜನರ ವಿರುದ್ಧ ಪ್ರಕರಣಗಳನ್ನು ವಜಾಗೊಳಿಸಿತ್ತು. ಅದರಲ್ಲಿ ಪ್ರಥಮ ಬಾರಿಗೆ ಕಲ್ಲು ತೂರಾಟ ನಡೆಸಿದವರೂ ಸೇರಿದ್ದರು.ನಾವು ಮೊದಲ ಬಾರಿಗೆಕಲ್ಲು ತೂರಾಟ ನಡೆಸಿದವರನ್ನು ಕ್ಷಮಿಸಿದ್ದೇವೆ. ಅವರಿನ್ನೂ ಚಿಕ್ಕವರಾಗಿದ್ದು ಅವರು ಇತರರಿಂದ ಪ್ರಭಾವಿತರಾಗಿರಬಹುದು. ನಾವು ಅವರಿಗೆ ತಿದ್ದಿಕೊಳ್ಳಲು ಅವಕಾಶ ನೀಡಿದ್ದೇವೆ ಎಂದರು.
ಇದೇವೇಳೆ ಬುಲೆಟ್ ಗಳ ಮೂಲಕ ನಕ್ಸಲ್ ಚಳವಳಿ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾವು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸ್ವಾತಂತ್ರ್ಯದ ನಂತರ ತಲುಪಲಾಗದ ಪ್ರದೇಶಗಳನ್ನು ನಾವು ತಲುಪಲು ಪ್ರಯತ್ನಿಸುತ್ತಿದ್ದೇವೆ ಎಂದು ತಿ