ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾದ ವೈ ಎಸ್ ಆರ್ ಕಾಂಗ್ರೆಸ್: ಟಿಡಿಪಿ ಬೆಂಬಲ

ವಿಜಯವಾಡ:ಮಾ-16: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವೈಎಸ್‌ಆರ್‌ ಕಾಂಗ್ರೆಸ್‌ ಮುಂದಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ವರಿಷ್ಠ ಎನ್‌. ಚಂದ್ರಬಾಬು ನಾಯ್ಡು ಕೂಡ ಅವಿಶ್ವಾಸ ಗೊತ್ತುವಳಿಗೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಇತರ ಪ್ರತಿಪಕ್ಷಗಳೂ ಇದನ್ನು ಬೆಂಬಲಿಸಲಿವೆ ಎಂದು ವೈಎಸ್ಸಾರ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್‌ ಮೋಹನ್‌ ರೆಡ್ಡಿ ಹೇಳಿದ್ದಾರೆ.

ಅವಿಶ್ವಾಸ ಗೊತ್ತುವಳಿ ಮಂಡಿಸಲು ಕನಿಷ್ಠ 50 ಸಂಸದರ ಬೆಂಬಲದ ಅಗತ್ಯವಿದೆ. ವೈಎಸ್ಸಾರ್‌ ಕಾಂಗ್ರೆಸ್‌ನ 9 ಮತ್ತು ಟಿಡಿಪಿಯ 16 ಸಂಸದರು ಸೇರಿದರೂ ಸದಸ್ಯ ಬಲ ಸಾಕಾಗುವುದಿಲ್ಲ. ಎನ್‌ಡಿಎಯೇತರ ಪಕ್ಷಗಳು ‘ಕದಡಿದ ನೀರಿನಲ್ಲಿ ಗಾಳ ಹಾಕುವ’ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ