ಎರಡು ಕೋಟಿ ರೂ. ಇನ್ಶುರೆನ್ಸ್ ಹಣಕ್ಕಾಗಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ

ಕುರ್ನೂಲು,ಮಾ.16- ಎರಡು ಕೋಟಿ ರೂ. ಇನ್ಶುರೆನ್ಸ್ ಹಣಕ್ಕಾಗಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಕುರ್ನೂಲಿನ ನಿವಾಸಿ ಶ್ರೀನಿವಾಸಲು ಎಂದು ಗುರುತಿಸಲಾಗಿದೆ.

ಶ್ರೀನಿವಾಸಲು ಅವರಿಗೆ ವಿವಿಧ ಇನ್ಶುರೆನ್ಸ್ ಪಾಲಿಸಿಗಳನ್ನು ಮಾಡಿಸಿದ್ದು, ಸುಮಾರು ಎರಡು ಕೋಟಿ ರೂ. ಇನ್ಸ್‍ರೆನ್ಸ್ ಹಣವಿತ್ತು.
ಗಂಡ ಸತ್ತರೆ 2 ಕೋಟಿ ರೂ. ವಿಮೆ ಹಣ ಸಿಗುತ್ತದೆ ಎಂದು ಪತ್ನಿ ರಮಾದೇವಿ ಗಂಡನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂದು ಪೆÇಲೀಸರು ಹೇಳಿದ್ದಾರೆ.

ಜನವರಿ 25ರಂದು ರಮಣ ಹಾಗೂ ಮೋಯಿನ್ ಬಾಷಾ ಎಂಬುವರೊಂದಿಗೆ ಸೇರಿಕೊಂಡು ಪತ್ನಿ ಓರ್ವಾಕಲ್ಲು ಹೆದ್ದಾರಿ ಬಳಿ ಲಾರಿ ಬರುವುದನ್ನು ಗಮನಿಸಿ ಶ್ರೀನಿವಾಸಲು ಅವರನ್ನು ಲಾರಿ ಕೆಳಗೆ ತಳ್ಳಿದ್ದರು. ಇದರಿಂದ ಶ್ರೀನಿವಾಸಲು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ