ಬೆಂಗಳೂರು, ಮಾ.16- ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ತನ್ನ ಎಕ್ಸಿಕ್ಯೂಟಿವ್ ಮತ್ತು ಪೆÇ್ರಫೆಷನಲ್(ವೃತ್ತಿಪರ) ಕೋರ್ಸ್ಗಳಿಗೆ ಹೊಸ ಪಠ್ಯಕ್ರಮವನ್ನು ಪರಿಚಯಿಸುತ್ತಿದೆ.
2017ರಲ್ಲಿ ತಿದ್ದುಪಡಿಯಾದ ಕಾನೂನು ಹಾಗೂ ವ್ಯವಹಾರಿಕ ಬದಲಾವಣೆಗಳನ್ನು ಆಧರಿಸಿ ಪಠ್ಯಕ್ರಮಗಳನ್ನು ಬದಲಾವಣೆ ಮಾಡಿದೆ ಎಂದು ಐಸಿಎಸ್ಐನ ಅಧ್ಯಕ್ಷ ಸಿ.ಎಸ್.ಮಕರಂದ್ಲೆಲೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೊಸ ಪಠ್ಯ ಕ್ರಮಗಳು ಕಾರ್ಯನಿರ್ವಹಣಾ ಕ್ಷೇತ್ರದಲ್ಲಿ 8 ಪತ್ರಿಕೆಗಳನ್ನು, ವೃತ್ತಿಪರತೆಯಲ್ಲಿ 9 ಪತ್ರಿಕೆಗಳನ್ನು ಒಳಗೊಂಡಿದೆ. ಬ್ಯಾಂಕಿಂಗ್, ವಿಮೆ, ಭೌದ್ದಿಕ ಆಸ್ತಿಗಳು, ವಿದೇಶಿವಿನಿಮಯ, ನೇರ ತೆರಿಗೆ, ಕಾರ್ಮಿಕ, ಕೈಗಾರಿಕೆ ಸೇರಿದಂತೆ ಸುಮಾರು 9 ವಿಷಯಗಳಲ್ಲಿ ಪಠ್ಯ ಕ್ರಮಗಳನ್ನು ಬದಲಾವಣೆ ಮಾಡಲಾಗಿದೆ. 2018ರ ಮಾ.1ರಿಂದಲೇ ಹೊಸ ಪಠ್ಯ ಕ್ರಮಗಳು ಜಾರಿಗೆ ಬರುತ್ತವೆ. ಜಿಎಸ್ಟಿ ವ್ಯವಸ್ಥೆ ಸೇರಿದಂತೆ ಹೊಸ ಹೊಸ ಬದಲಾವಣೆಗೆ ಪೂರಕವಾಗಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.
ದೇಶದಾದ್ಯಂತ ಸುಮಾರು 10 ಲಕ್ಷ ನೋಂದಾಯಿತ ಕಂಪೆನಿಗಳಿವೆ. ಆದರೆ, ಕಂಪೆನಿ ಸೆಕ್ರೆಟರೀಸ್ ಇರುವುದು ಕೇವಲ 54ಸಾವಿರ ಮಂದಿ. ಹೀಗಾಗಿ ಬೇಡಿಕೆ ಹೆಚ್ಚಿದೆ. ರಾಜ್ಯದಲ್ಲಿ 2011 ಜನರ ಕಂಪೆನಿ ಸೆಕ್ರೆಟರಿಗಳಿದ್ದಾರೆ. ಈ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗ ಅವಕಾಶಗಲಿವೆ. ಹೀಗಾಗಿ ಹೆಚ್ಚು ಜನ ಈ ಶಿಕ್ಷಣ ಪಡೆಯಬೇಕೆಂದು ಅವರು ಸಲಹೆ ನೀಡಿದರು. ಪ್ರತಿ ಐದು ವರ್ಷಕ್ಕೊಮ್ಮೆ ಸಂಸ್ಥೆ ಪಠ್ಯ ಕ್ರಮಗಳನ್ನು ಬದಲಾವಣೆ ಮಾಡುತ್ತದೆ. ಅದರಂತೆ ಈ ವರ್ಷವೂ ಬದಲಾವಣೆ ಮಾಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪರಿಷತ್ನ ಸದಸ್ಯರಾದ ಗೋಪಾಲಕೃಷ್ಣ ಹೆಗಡೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.