ಬೆಂಗಳೂರು, ಮಾ.16- ಸಿಮೆಂಟ್ ಮಿಕ್ಸರ್ ಲಾರಿಯೊಂದು ಬೈಕ್ಗೆ ಅಪ್ಪಳಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗರುಡಾಚಾರ್ಪಾಳ್ಯ ನಿವಾಸಿ ಗೌರಮ್ಮ (39) ಮೃತಪಟ್ಟ ಮಹಿಳೆ. ರಾಜೇಶ್ ಎಂಬುವರು ದೂರದ ಸಂಬಂಧಿ ಗೌರಮ್ಮ ಅವರನ್ನು ತಮ್ಮ ಬೈಕ್ನಲ್ಲಿ ಕರೆದುಕೊಂಡು ರೈಲ್ವೆ ನಿಲ್ದಾಣ ಕಡೆಯಿಂದ ಗರುಡಾಚಾರ್ಪಾಳ್ಯಕ್ಕೆ ಸಂಜೆ 6.15ರ ಸಮಯದಲ್ಲಿ ಹೋಗುತ್ತಿದ್ದರು. ಸರ್ವೀಸ್ ರಸ್ತೆಯ ಐಟಿಐ ಗೇಟ್ ಬಳಿ ಬರುತ್ತಿದ್ದಂತೆ ಸಿಮೆಂಟ್ ಮಿಕ್ಸರ್ ಲಾರಿ ಅತಿವೇಗವಾಗಿ ಮುನ್ನುಗ್ಗಿ ಇವರ ಬೈಕ್ಗೆ ಅಪ್ಪಳಿಸಿದೆ. ಪರಿಣಾಮವಾಗಿ ಹಿಂಬದಿ ಸವಾರರಾದ ಗೌರಮ್ಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಬೈಕ್ ಸವಾರ ರಾಜೇಶ್ ಗಾಯಗೊಂಡಿದ್ದು, ಕೆ.ಆರ್.ಪುರ ಸಂಚಾರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.