ಬೆಂಗಳೂರು, ಮಾ.16- ನಡೆದು ಹೋಗುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಯನ್ನು ಹಿಂಬಾಲಿಸಿದ ದರೋಡೆಕೋರರು ಚಾಕುವಿನಿಂದ ತೊಡೆಗೆ ಇರಿದು ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಸೋಲದೇವನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಚಾರ್ಯ ಕಾಲೇಜಿನ ವಿದ್ಯಾರ್ಥಿ ರಾಬರ್ಟ್ ಡೇವಿಡ್ಸನ್ ದರೋಡೆಗೊಳಗಾದವರು.
ಆಚಾರ್ಯ ಕಾಲೇಜಿನಲ್ಲಿ ಡಿಪೆÇ್ಲಮಾ ಇನ್ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ರಾಬರ್ಟ್ ಡೇವಿಡ್ ರಾತ್ರಿ 10.45ರಲ್ಲಿ ಆಚಾರ್ಯ ಕಾಲೇಜು ರಸ್ತೆಯಲ್ಲಿ ನಡೆದು ಹೋಗುತ್ತಿದ್ದನು.
ಈ ವೇಳೆ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಮೂವರು ಈತನನ್ನು ಕರೆದಿದ್ದಾರೆ.
ರಾಬರ್ಟ್ ಇವರ ಮಾತಿಗೆ ಕಿವಿಗೊಡದೆ ತನ್ನ ಪಾಡಿಗೆ ತಾನು ನಡೆದುಕೊಂಡು ಸಾಗುತ್ತಿದ್ದಾಗ, ಹಿಂಬಾಲಿಸಿ ಬಂದ ಈ ಮೂವರು ಈತನನ್ನು ಅಡ್ಡಗಟ್ಟಿ ಬೆದರಿಸಿ ಚಾಕುವಿನಿಂದ ತೊಡೆಗೆ ಇರಿದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆಗೊಳಗಾದ ರಾಬರ್ಟ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾನೆ. ಈ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.