ಇಂದೋರ್,ಮಾ.16- ನವ ವಧುವಿಗೆ ಇದ್ದಕ್ಕಿದ್ದಂತೆ ವಾಂತಿಯಾಗಿದ್ದು, ವೈದ್ಯರ ಬಳಿ ಕರೆದೊಯ್ದಾಗ ಆಕೆ ಆರು ವಾರಗಳ ಗರ್ಭಿಣಿ ಎಂಬುದು ತಿಳಿದು ಗಂಡನ ಮನೆಯವರು ಕಂಗಾಲಾದ ಘಟನೆ ನಡೆದಿದೆ.
ಮದುವೆಯಾಗಿ ಗಂಡನ ಮನೆಗೆ ಬರುತ್ತಿದ್ದಂತೆ ನವ ವಧುವಿ ವಾಂತಿ ಮಾಡಿಕೊಂಡಿದ್ದಾಳೆ. ಆರೋಗ್ಯ ಏರುಪೇರಾಗಿರುವುದನ್ನು ಗಮನಿಸಿದ ಗಂಡನ ಮನೆಯವರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದಾಗ ಆಕೆ ಮದುವೆಗೆ ಮುಂಚೆಯೇ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.
ಇದರಿಂದ ಕಂಗಾಲಾದ ವರ, ವಧುವನ್ನು ವಿಚಾರಸಿದಾಗ, ಮದುವೆಗೂ ಮುನ್ನ ಸಂಬಂಧಿಕನ ಜೊತೆ ಸಂಬಂಧವಿಟ್ಟುಕೊಂಡಿದ್ದ ಬಗ್ಗೆ ತಿಳಿಸಿದ್ದಾಳೆ.
ಜೊತೆಗೆ ಇದನ್ನು 100 ರೂ. ಸ್ಟ್ಯಾಂಪ್ನಲ್ಲಿ ಬರೆದುಕೊಟ್ಟಿದ್ದಾಳೆ. ನಂತರ ವರ ಮದುವೆ ರದ್ದು ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದಾನೆ. ವಿಚಾರಣೆ ನಡೆಸಿದ ಕೋರ್ಟ್ ಮದುವೆಯನ್ನು ಅನೂರ್ಜಿತಗೊಳಿಸಿದೆ.