ಪ್ರಧಾನಿ ನರೇಂದ್ರ ಮೋದಿಯವರು ಅಂಗೈಯಲ್ಲಿ ಸ್ವರ್ಗ ತೋರಿಸಿದ್ದಾರೆ – ಉಗ್ರಪ್ಪ

ಮಹದೇವಪುರ, ಮಾ.16- ಪ್ರಧಾನಿ ನರೇಂದ್ರ ಮೋದಿಯವರು ಅಂಗೈಯಲ್ಲಿ ಸ್ವರ್ಗ ತೋರಿಸಿದ್ದಾರೆಂಬುದು ಎಲ್ಲರಿಗೂ ಮನವರಿಕೆ ಆಗಿದ್ದು ರಾಜ್ಯದಲ್ಲೂ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ತಿಳಿಸಿದರು.
ಕ್ಷೇತ್ರದ ಮಾರತ್ ಹಳ್ಳಿ ಬಳಿ ಪಾರ್ಥಾ ಡೆಂಟಲ್ ಕ್ಲೀನಿಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುಪಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಬಿಜೆಪಿಯ ಅವನತಿ ಆರಂಭವಾಗಿದೆ ಎಂದು ತಿಳಿಸಿದರು.
ಪಾರ್ಥಾ ಡೆಂಟಲ್ ಅತಿ ದೊಡ್ಡ ಸಂಸ್ಥೆ ಈ ಸಂಸ್ಥೆಯು ತನ್ನ 89 ನೇಯ ಶಾಖೆಯನ್ನು ಆರಂಭಿಸುವ ಮೂಲಕ ದೇಶದ ನಿರುದ್ಯೋಗ ವ್ಯವಸ್ಥೆಯನ್ನು ಹೋಗಲಾಡಿಸುವ ನಿಟ್ಟಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ ಎಂದರು.  ಈಗಾಗಲೆ 1200ಕ್ಕೂ ಹೆಚ್ಚು ಉದ್ಯೋಗಾವಕಾಶ ಕಲ್ಪಸಿದೆ, ಮಾತ್ರವಲ್ಲದೆ ಬಡ ಮತ್ತು ಸಾಮಾನ್ಯ ಜನರಿಗೆ ಕೈಗೆಟಕುವ ಧರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸಯನ್ನು ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಪಾಲಿಕೆ ಸದಸ್ಯ ರಮೇಶ್, ಫಾರ್ಥಾ ಸಂಸ್ಥೆಯ ಅಧ್ಯಕ್ಷ ಪಾರ್ಥಸಾರತಿ, ಸಿಇಒ ವಿಜಯ್, ಜಿಎಂ ರಮೇಶ್ ಮುಂತಾದವರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ