ಮೈಸೂರು,ಮಾ.16- ನಗರದ ಆರ್ಎಸ್ಎಸ್ ಮುಖಂಡ ರಾಜು ಕೊಲೆ ಪ್ರಕರಣದ ಆರೋಪಿ ಹಬೀಬ್ ಪಾಷನನ್ನು ಗಡಿಪಾರು ಮಾಡಲಾಗಿದೆ.
ಮುಂದಿನ ಆರು ತಿಂಗಳ ಕಾಲ ಮೈಸೂರು, ಮಂಡ್ಯ, ಹುಣಸೂರು, ಮಂಗಳೂರು ಹಾಗೂ ಚಾಮರಾಜನಗರಕ್ಕೆ ಈತ ಪ್ರವೇಶ ಮಾಡುವಂತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಷ್ಣುವಧನ್ ಅವರು ಈ ಆರೋಪಿಗೆ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಆರ್ಎಸ್ಎಸ್ ಹಾಗೂ ಬಿಜೆಪಿ ಮುಖಂಡರ ಹತ್ಯೆ ಪ್ರಕರಣದಲ್ಲಿ ಹಬೀಬ್ ಇತ್ತೀಚೆಗೆ ಜಾಮೀನು ಪಡೆದು ಬಿಡುಗಡೆಯಾಗಿದ್ದು, ಈತನ ಮೇಲೆ ಎಂಟು ಕೊಲೆ ಪ್ರಕರಣಗಳಿವೆ. ಈತ ಮೂಲತಃ ಹುಣಸೂರು ತಾಲ್ಲೂಕಿನವನು. ಎಸ್ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಆರೋಪಿ ಹಬೀಬ್ ಪಾಷ ಶಾಂತಿನಗರದಲ್ಲಿ ವಾಸವಾಗಿದ್ದ.