![RKP_4681](http://kannada.vartamitra.com/wp-content/uploads/2018/03/RKP_4681-569x381.jpg)
ಬೆಂಗಳೂರು, ಮಾ.16-ಸ್ಲಂ ಜನರಿಗೆ ವಸತಿ ಹಾಗೂ ನಿವೇಶನ ಹಕ್ಕನ್ನು ಖಾತ್ರಿ ಪಡಿಸುವ ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿಂದು ರಾಜ್ಯಮಟ್ಟದ ಬೃಹತ್ ರ್ಯಾಲಿ ನಡೆಸಿದವು.
ಟೌನ್ಹಾಲ್ನಿಂದ ಫ್ರೀಡಂಪಾರ್ಕ್ವರೆಗೆ ಸ್ಲಂ ಜನರ ಸಂಘಟನೆ, ಬೃಹತ್ ಬೆಂಗಳೂರು ಗೃಹ ಕಾರ್ಮಿಕರ ಸಂಘ, ಎಐಸಿಸಿಟಿಯು, ಪರ್ಯಾಯ ಕಾನೂನು ವೇದಿಕೆ, ಜನಬಿಂಬ, ಆ್ಯಕ್ಷನ್ ಫಾರ್ ಸೋಷಿಯಲ್ ಜಸ್ಟೀಸ್, ಸ್ಲಂ ನಿವಾಸಿ ಸಂಘಟನೆಗಳ ಒಕ್ಕೂಟ, ಸ್ಲಂ ಮಹಿಳೆಯರ ಸಂಘಟನೆ, ಮೈಸೂರು ಸ್ಲಂ ನಿವಾಸಿಗಳ ಒಕ್ಕೂಟ, ಕಾಗದ ಆಯುವವರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿದವು. ಇದರಿಂದಾಗಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ರಾಜ್ಯದಲ್ಲಿ ವಸತಿ ಹಾಗೂ ಭೂಮಿ ಹಕ್ಕನ್ನು ಒಳಗೊಂಡ ಸಮಗ್ರ ಸ್ಲಂಗಳ ಅಭಿವೃದ್ದಿ ಕಾಯ್ದೆ ಜಾರಿ, ಸ್ಲಂ ಬೋರ್ಡ್ ಕ್ವಾಟ್ರರ್ಸ್ ಕ್ರಯ ಪತ್ರ ನೀಡುವುದು, ಸ್ಲಂ ತೆರವುಗೊಳಿಸಬಾರದು, ಸ್ಲಂ ನಿವಾಸಿಗಳಿಗೆ ಕಡ್ಡಾಯ ಮೂಲಭೂತ ಸೌಕರ್ಯ ಒದಗಿಸುವುದು, ಸ್ಲಂ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಾಗೂ ಭೂಮಿ ಮೀಸಲಿಡುವುದು,ಸ್ಲಂಗಳ ಅಭಿವೃದ್ದಿ ಸಮಿತಿಗೆ ಕನಿಷ್ಠ ಶೇ.50ರಷ್ಟು ಪ್ರಾತಿನಿಧ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.