ತುಮಕೂರು, ಮಾ.16- ಪೆÇಲೀಸರ ಸೋಗಿನಲ್ಲಿ ಬಂದ ದರೋಡೆಕೋರರು ರೈತ ಮುಖಂಡರೊಬ್ಬರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿರಾ ತಾಲ್ಲೂಕಿನ ದ್ವಾರಕುಂಟೆ ಗ್ರಾಮದಲ್ಲಿ ನಡೆದಿದೆ.
ರೈತ ಮುಖಂಡ ಡಿ.ಜೆ.ನಾಯಕ್ ಎಂಬುವರ ಮನೆಗೆ ರಾತ್ರಿ 12 ಗಂಟೆಗೆ ಬಂದ ಕಳ್ಳರು ಪೆÇಲೀಸರು ಎಂದು ಬಾಗಿಲು ಬಡಿದಿದ್ದಾರೆ. ಕೂಡಲೇ ಬಾಗಿಲು ತೆಗೆದಾಗ ಒಳ ನುಗ್ಗಿದ ಇಬ್ಬರು ಕಳ್ಳರು ನಾಯಕ್ ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ.
ಮನೆಯಲ್ಲಿರುವ ಆಭರಣ , ಒಡವೆಗಳನ್ನು ಕೊಡುವಂತೆ ಧಮ್ಕಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಎಚ್ಚೆತ್ತ ನಾಯಕ್ ಉಪಾಯದಿಂದ ಕಳ್ಳರನ್ನು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಹೊರ ಬಂದಿದ್ದಾರೆ.
ಕೂಡಲೇ ಪೆÇಲೀಸರಿಗೆ ಮಾಹಿತಿ ನೀಡಿದ್ದು , ಸ್ಥಳಕ್ಕಾಗಮಿಸಿದ ಪಟ್ಟನಾಯಕನಹಳ್ಳಿ
ಠಾಣೆ ಪೆÇಲೀಸರು ಇಬ್ಬರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿÉ್ಕೂಂಡಿದ್ದಾರೆ.