ವಿಜಯಪುರ, ಮಾ.16- ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ರಾಜಸ್ವ ತಂದುಕೊಡುವ ಝಳಕಿ ಆರ್ಟಿಒ ಚೆಕ್ಪೆÇೀಸ್ಟ್ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್ಟಿಒ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಝಳಕಿ ಸಮೀಪದ ಈ ಆರ್ಟಿಒ ಚೆಕ್ಪೆÇೀಸ್ಟ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಅಮರನಾಥರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಮಲ್ಲೇಶ್ ದೊಡಮನಿ ನೇತೃತ್ವದ ತಂಡ ದಾಳಿ ನಡೆಯಿತು.
ಚೆಕ್ಪೆÇೀಸ್ಟ್ನಲ್ಲಿದ್ದ 25 ಸಾವಿರ ರೂ. ನಗದು ಮತ್ತು ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡು ಕಚೇರಿಯನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ರಂಜಿತ್ ಹಾಗೂ ಅಲ್ಲಿದ್ದ ಐದು ಮಂದಿ ಏಜೆಂಟ್ಗಳು, ಇಬ್ಬರು ಹೋಮ್ಗಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವರ್ಷ ಮಾ.7ರಂದು ಕೂಡ ಇದೇ ಚೆಕ್ಪೆÇೀಸ್ಟ್ ಮೇಲೆ ಎಸಿಬಿ ದಾಳಿ ನಡೆದಿದ್ದುದನ್ನು ಸ್ಮರಿಸಬಹುದು