ಚೆಕ್ ಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಚೆಕ್ ಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅನಧಿಕೃತ ಹಣ ಸೇರಿದಂತೆ ಆರ್ ಟಿ ಓ ಇನ್ಸ್ಪೆಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಎ.ಸಿ.ಬಿ ಎಸ್.ಪಿ ಅಮರನಾಥ್ ರೆಡ್ಡಿ ಮಾರ್ಗದರ್ಶನದಂತೆ  ಎ.ಸಿ.ಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ ನೇತೃತ್ವದಲ್ಲಿ ದಾಳಿ ನಡೆಯಿಸಲಾಗಿದ್ದು, ದಾಳಿ‌ ವೇಳೆ ಅನಧೀಕೃತವಾಗಿ ಸಂಗ್ರಹಿಸಿದ್ದ 25 ಸಾವಿರಕ್ಕೂ ಹೆಚ್ಚು ‌ ಹಣ ಜಫ್ತಿ ಮಾಡಲಾಗಿದೆ. ಆರ್.ಟಿ.ಒ ಇನ್ಸಪೆಕ್ಟರ್ ರಂಜೀತ್ ಸೇರಿದಂತೆ ಇಬ್ಬರು ಹೊಮಗಾರ್ಡ 5 ಜನ ಖಾಸಗಿ ಎಜೆಂಟರು ಸೇರಿ ಒಟ್ಟು 8 ಜ‌ನರನ್ನು ಎ.ಸಿ.ಬಿ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡು ವಿಚಾರಣೆ ನಡೆಸಿದ್ದಾರೆ. ಹುಬ್ಬಳ್ಳಿ, ಹಾಗೂ ಹೊಸಪೇಟೆ ಮಾರ್ಗ ದಿಂದ ಝಳಕಿ ಚೆಕ್ ಪೋಸ್ಟ್ ಮೂಲಕ ನಿತ್ಯ ಸಾವಿರಾರು ವಾಹನಗಳು ಮಹಾರಾಷ್ಟ್ರ ಕ್ಕೆ ಹೋಗಿಬರುತ್ತವೆ. ಈ ಚೆಕ್ ಪೋಸ್ಟ್ ನಲ್ಲಿ ಆರ್.ಟಿ.ಒ ಅಧಿಕಾರಿಗಳು ಹಫ್ತಾ ವಸೂಲಿ ಮಾಡುತ್ತಾರೆ ಎಂಬ ಆರೋಪದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನು ಕಳೆದ ವರ್ಷ ಮಾರ್ಚ 7ರಂದು ಕೂಡಾ ಎ.ಸಿ.ಬಿ ಅಧಿಕಾರಿಗಳು ಝಳಕಿ ಚಕ್ ಪೋಸ್ಟ ಮೇಲೆ ದಾಳಿ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ