ಮಂಡ್ಯ, ಮಾ.15- ಶ್ರೀರಂಗಪಟ್ಟ ಹೊರವಲಯದ ಗಂಜಾಮ್ನ ಶ್ರೀ ನಿಮಿಷಾಂಬ ದೇವಾಲಯ ಹುಂಡಿಯಲ್ಲಿ ಎರಡು ತಿಂಗಳಲ್ಲಿ 21,79,411 ರೂ. ಸಂಗ್ರಹವಾಗಿದೆ.
ದೇವಾಲಯದಲ್ಲಿ ಒಟ್ಟು 18 ಹುಂಡಿಗಳನ್ನು ಮುಜರಾಯಿ ಇಲಾಖೆ ವತಿಯಿಂದ ಇಡಲಾಗಿದ್ದು, ಇತ್ತೀಚೆಗೆ ಈ ಎಲ್ಲ ಹುಂಡಿಗಳ ಹಣವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಎಣಿಸಲಾಗಿದ್ದು, ಒಟ್ಟು 21,79,411 ರೂ. ಸಂಗ್ರಹವಾಗಿರುವುದಾಗಿ ದೇವಾಲಯ ಟ್ರಸ್ಟ್ ತಿಳಿಸಿದೆ.
ಎರಡು ತಿಂಗಳ ಹಿಂದೆ ಹುಂಡಿಯಲ್ಲಿದ್ದ ಹಣವನ್ನು ಎಣಿಸಲಾಗಿತ್ತು. ಇತ್ತೀಚೆಗೆ ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಾಗಿ ಈ ದೇವಾಲಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರಬಹುದೆಂದು ಎಣಿಕೆ ಮಾಡಲಾಗಿದೆ.ಇದರಲ್ಲಿ 82 ಅಮೆರಿಕಲ್ ಡಾಲರ್, 13 ಮಲೇಶಿಯಾ ರಿಂಗೇಟ್, 39.80 ಗ್ರಾಂ ಚಿನ್ನ, 2.69 ಕೆಜಿ ಬೆಳ್ಳಿ ಹಾಗೂ 21,79,411 ಲಕ್ಷ ರೂ. ಸಂಗ್ರಹವಾಗಿದೆ. ದೇವಾಲಯದ ಸಿಇಒ ನಂಜೇಗೌಡ, ಎಸ್ಬಿಐ ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಈ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.