ಕೋಲಾರ, ಮಾ.15- ನಗರದ ಎರಡು ದೇವಾಲಯಗಳ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಬೆಳ್ಳಿ ವಸ್ತುಗಳು ಹಾಗೂ ಸಿಸಿ ಟಿವಿಯನ್ನು ಕದ್ದೊಯ್ದಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್ಟಿಒ ಕಚೇರಿ ಬಳಿಯ ಮುನೇಶ್ವರ ದೇವಾಲಯ ಹಾಗೂ ರೈಲ್ವೆ ನಿಲ್ದಾಣ ರಸ್ತೆಯ ಚೌಡೇಶ್ವರಿ ದೇವಾಲಯದಲ್ಲಿ ರಾತ್ರಿ ಕಳ್ಳತನ ನಡೆದಿದೆ.
ಈ ಎರಡು ದೇವಾಲಯಗಳ ಬೀಗ ಮುರಿದು ಒಳ ನುಗ್ಗಿದ ಚೋರರು ಅಲ್ಲಿದ್ದ ಬೆಳ್ಳಿಯ ಸಾಮಾನುಗಳು ಹಾಗೂ ಸಿಸಿ ಟಿವಿಯನ್ನು ಕಳ್ಳತನ ಮಾಡಿದ್ದಾರೆ. ಇಂದು ಬೆಳಗ್ಗೆ ಈ ದೇವಾಲಯಗಳ ಅರ್ಚಕರು ಪೂಜೆ ಮಾಡಲು ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ನಗರ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.