ಬೆಂಗಳೂರು,ಮಾ.15- ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೌಡಿಗಳ ಉಪಟಳ, ಮಾದಕ ವಸ್ತು ಮಾರಾಟಗಾರರು, ಸರಗಳ್ಳರು, ಅತ್ಯಾಚಾರಿ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೆÇಲೀಸರಿಗೆ ನಿರ್ದೇಶನ ನೀಡಿರುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಪೆÇಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ನಂತರ ಅವರು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ರೌಡಿಗಳ ಉಪಟಳ ತಗ್ಗಿಸಲು ಕ್ರಮ ಕೈಗೊಳ್ಳಬೇಕು, ನಿಗದಿತ ಗಡುವಿನ ನಂತರ ಬಾರ್ಗಳನ್ನು, ವೈನ್ ಸ್ಟೋರ್ಗಳನ್ನು ತೆರೆಯದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ಅಪರಾಧ ಪ್ರಕರಣಗಳು ಮರುಕಳಿಸದಂತೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಲಾಗಿದ್ದು, ಶಾಲಾಕಾಲೇಜು, ಮುಖ್ಯವಾಗಿ ಹೆಣ್ಣು ಮಕ್ಕಳಿರುವ ಕಡೆ ಹೊಸ ಔಟ್ಪೆÇೀಸ್ಟ್ಗಳನ್ನು ಪ್ರಾರಂಭಿಸಲಾಗಿದೆ.
ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮಟ್ಕಾ, ಸ್ಕಿಲ್ ಗೇಮ್ಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕೊಲೆ, ಸರ ಅಪಹರಣ ಪ್ರಕರಣಗಳನ್ನು ಕಡಿಮೆ ಮಾಡಲು ಈಗಾಗಲೇ ನಗರದಲ್ಲಿ ಬೀಟ್ ಮತ್ತು ಸಬ್ಬೀಟ್ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. 2011ರಿಂದ 2017ರವರೆಗೆ ಪೆÇೀಸ್ಕೊ ಕಾಯ್ದೆಯಡಿ 33 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ವಿವರಿಸಿದರು.
2008ರಿಂದ 2013ರ ಅವಧಿಯಲ್ಲಿ 1160 ಕೊಲೆಗಳಾಗಿದ್ದವು. 2013ರಿಂದ ಕಳೆದ ಫೆಬ್ರವರಿವರೆಗೆ 98 ಕೊಲೆ ಪ್ರಕರಣಗಳಾಗಿವೆ. 2008-13ರ ಅವಧಿಯಲ್ಲಿ 1808 ಸರಗಳ್ಳನ ಪ್ರಕರಣಗಳಿದ್ದರೆ, ನಮ್ಮ ಸರ್ಕಾರದ ಅವಧಿಯಲ್ಲಿ 1770 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೂಂಡಾ ಕಾಯ್ದೆಯಡಿ 11 ಪ್ರಕರಣಗಳು ದಾಖಲಾಗಿದ್ದರೆ, ನಮ್ಮ ಸರ್ಕಾರದ ಆವಧಿಯಲ್ಲಿ 71 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
2012ರಲ್ಲಿ ಬೆಂಗಳೂರು ನಗರದಲ್ಲಿ ಜನಸಂಖ್ಯೆ ಸುಮಾರು 90 ಲಕ್ಷದಷ್ಟಿತ್ತು. ಈಗ 1. 25 ಕೋಟಿ ಜನಸಂಖ್ಯೆಯಿದೆ. ಜನಸಂಖ್ಯೆ ಹೆಚ್ಚಾಗಿದ್ದರೂ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ ಎಂದು ಗೃಹಸಚಿವರು ಸಮರ್ಥಿಸಿಕೊಂಡರು.