ನವದೆಹಲಿ, ಮಾ.15- ಸಿಬಿಎಸ್‍ಇನ 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್‍ಆಫ್ ಮೂಲಕ ಸೋರಿಕೆಯಾಗಿದೆ. ಲೆಕ್ಕಶಾಸ್ತ್ರ ಪ್ರಶ್ನೆ ಪತ್ರಿಕೆಯ 2ನೇ ಸೆಟ್, ಸೋರಿಕೆಯಾಗಿರುವ ಪ್ರಶ್ನೆಗಳಿಗೆ ಹೋಲುತ್ತದೆ ಎಂದು ವರದಿಯಾಗಿದೆ. ಈ ಬಗ್ಗೆ ಪರಿಣಿತರ ತಂಡದಿಂದ ತನಿಖೆ ನಡೆಸಲಾಗುವುದು ಎಂದು ಸಿಬಿಎಸ್‍ಇ ಹೇಳಿದೆ. ಈ ಕುರಿತು ಟ್ವಿಟ್ ಮಾಡಿರುವ ನವದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಶೀಘ್ರ ಕ್ರಮ ಕೈಗೊಳ್ಳಬೇಕು, ಸಿಬಿಎಸ್‍ಇ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಹೇಳಿದ್ದಾರೆ.