ಸರಕಾರದಿಂದ ಜಿಲ್ಲೆಯಲ್ಲಿ ತೆರೆಯಲಾಗಿರುವ ತೊಗರಿ ಖರೀದಿ ಕೇಂದ್ರದಲ್ಲಿ ಲಂಚಾವತಾರ ನಡೆಯುತ್ತಿದೆ, ಅಷ್ಟೇ ಅಲ್ಲದೇ ಒಬ್ಬ ರೈತನಿಂದ ೧೦ ಕ್ವಿಂಟಲ್ ಮಾತ್ರ ಖರೀದಿ ಮಾಡುತ್ತಿದ್ದಾರೆ, ನಾವು ಜಾಸ್ತಿ ತೊಗರಿ ಬೆಳೆದ ರೈತರ ಗತಿ ಹೇಗೆ ಎಂದು ಆಗ್ರಹಿಸಿ ತೊಗರಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ದಲ್ಲಿ ನಡೆದಿದೆ…
ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ತೆರೆಯಲಾದ ತೊಗರಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ ರೂ, 250 ಲಂಚ ಅಧಿಕಾರಿಗಳು ಕೇಳುತ್ತಿದ್ದಾರೆಂದು ಆರೋಪಿಸಿ ರೈತ ಗುರುರಾಜ್ ಗಡೇದ ಎಂಬುವರು ವಿಜಯಪುರದಲ್ಲಿನ ಅಂಬೇಡ್ಕರ್ ಸರ್ಕಲ್ ನಲ್ಲಿ ರಸ್ತೆಗೆ ತೊಗರಿ ಸುರಿದು ಪ್ರತಿಭಟನೆ ನಡೆಸಿದರು. ರೈತನ ಪ್ರತಿಭಟನೆಗೆ ರೈತರು ಸಾಥ್ ನೀಡಿ ಪ್ರತಿ ರೈತರಿಂದ ಕೇವಲ 10 ಕ್ವಿಂಟಾಲ್ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಹೆಚ್ಚಿಗೆ ಬೆಳೆದ ರೈತರು ಎಲ್ಲಿ ಮಾರಾಟ ಮಾಡಬೇಕೆಂದು ರೈತರು ಆಗ್ರಹಿಸಿದರು. ಈ ವೇಳೆ ಅಧಿಕಾರಿ ಹಾಗೂ ಸರಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಜಿಲ್ಲೆಯಲ್ಲಿ 92 ತೊಗರಿ ಕೇಂದ್ರಗಳನ್ನು ತೆರೆಯಲಾಗಿದೆ, ಜಿಲ್ಲೆಯಲ್ಲಿ 78607 ಕ್ವಿಂಟಾಲ್ ತೊಗರಿ ಖರೀದಿ ಗುರಿ ಇತ್ತು, ಇದರಲ್ಲಿ 60051 ಕ್ವಿಂಟಾಲ್ ಖರೀದಿಸಲಾಗಿದೆ. ಇನ್ನುಳಿದ 18556 ಕ್ವಿಂಟಾಲ್ ಖರೀದಿಬೇಕಿದೆ. ಇನ್ನು 4440 ರೈತರಿಂದ 430 ಕೋಟಿಯಷ್ಟು ಖರೀದಿ ಮಾಡಲಾಗಿದೆ. ಈಗಾಗಲೇ 44 ಕೋಟಿಯಷ್ಟು ಹಣ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ .ಇನ್ನುಳಿದ 386 ಕೋಟಿ ಹಣ ರೈತರ ಖಾತೆಗೆ ಜಮಾ ಮಾಡಬೇಕಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಉತ್ಪನ್ ಮಾರುಕಟ್ಟೆ ಸಹಾಯಕ ನಿರ್ದೇಶಕ ಮಹಾದೇವಪ್ಪ, ಚಬನೂರು, ತೊಗರಿ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದರು. ಈ ಹಿಂದೆ ರೈತರ ದೂರಿನನ್ವಯ ಗೊಲಗೇರಿ ತೊಗರಿಕೇಂದ್ರ ಬಂದ್ ಮಾಡಿಸಲಾಗಿದೆ. ಸರಕಾರ ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6 ಸಾವಿರ ಖರೀದಿಸಲು ಆದೇಶ ನೀಡಿದ್ದಾರೆ. ಮಾರ್ಚ 17 ವರಗೆ ಕೇಂದ್ರದಲ್ಲಿ ತೊಗರಿ ಖರೀದಿಸಲಾಗುವದು ಎಂದು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿನ ತೊಗರಿ ಖರೀದಿ ಕೇಂದ್ರಗಳು ಅವ್ಯವಹಾರ ತಾಣವಾಗುತ್ತಿವೆ. ಇನ್ನು ರೈತರಿಂದ ಲಂಚ ಪಡೆಯುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂದು ರೈತರು ಆಗ್ರಹಿಸಿದರು…
ಗುರುರಾಜ್ ಗಡೇದ್. ರೈತ
ಮಹಾದೇವಪ್ಪ ಚಬನೂರ್, ಸಹಾಯಕ ನಿರ್ದೇಶಕ ಕೃಷಿ ಇಲಾಖೆ.