ಬೆಂಗಳೂರು,ಮಾ.15-ಶ್ರೀ ಆದಿಶಿವಶಕ್ತಿ ಸಿದ್ದರ್ ಜ್ಞಾನಪೀಠಂ ವತಿಯಿಂದ ಏ.29ರಂದು ಅರಮನೆ ಮೈದಾನದಲ್ಲಿ ತ್ರಿಪುರವಾಸಿನಿಯಲ್ಲಿ 11,111 ಮಹಿಳೆಯರಿಂದ ದೀಪೆÇೀತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪೀಠದ ಅಧ್ಯಕ್ಷೆ ಡಾ.ಕೊಂದೈ ನಾಯಕಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷ ಎರಡು ಗ್ರಹಣಗಳು ಒಂದೇ ತಿಂಗಳಿನಲ್ಲಿ ಕಾಣಿಸಿಕೊಂಡಿರುವ ಕಾರಣ ದೇಶದಲ್ಲಿ ಅಪಘಾತಗಳು, ಅಗ್ನಿ ಅನಾಹುತಗಳು, ಭೂಕಂಪಗಳು, ಯುದ್ಧಗಳು ನಡೆಯುವ ಸಾಧ್ಯತೆಗಳಿವೆ. ಹಾಗಾಗಿ ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಈ ರೀತಿಯ ವಿಭಿನ್ನ ಪೂಜೆಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಕಳೆದ ವರ್ಷ ಶ್ರೀ ಶಿವಶಕ್ತಿ ಸಿದ್ಧರ ಜ್ಞಾನಪೀಠಂ ನೇತೃತ್ವದಲ್ಲಿ 10,008 ಮಂದಿ ಮಹಿಳೆಯರು ದೀಪ ಹಚ್ಚಿ ದಾಖಲೆ ನಿರ್ಮಿಸಿದ್ದರು. ಹಾಗಾಗಿ ಈ ಬಾರಿ ನಮ್ಮ ಸಂಸ್ಥೆ ವತಿಯಿಂದಲೂ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಮತ್ತು ವಿಶ್ವ ಶಾಂತಿಗಾಗಿ 11,111 ಮಹಿಳೆಯರಿಂದ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತ ಮಹಿಳೆಯರು 501 ರೂ. ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದರಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಒಂದು ಸೀರೆ, ಒಂದು ದೀಪ ಸ್ತಂಭ ಹಾಗೂ ಪೂಜಾ ಸಾಮಾಗ್ರಿಗಳನ್ನು ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗೆ ಮೊ:9980556577 ಸಂಪರ್ಕಿಸುವಂತೆ ಕೋರಲಾಗಿದೆ.