ದೆಹಲಿಯಲ್ಲಿರುವ ತನ್ನ ರಾಯಬಾರ ಅಧಿಕಾರಿಗಳಿಗೆ ಭಾರತ ಕಿರುಕುಳ ನೀಡುತ್ತಿದೆ : ಪಾಕ್ ಆರೋಪ

ಇಸ್ಲಾಮಾಬಾದ್ :ಮಾ-15: ದೆಹಲಿಯಲ್ಲಿರುವ ತನ್ನ ರಾಯಬಾರ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಭಾರತ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ ದೆಹಲಿಯಲ್ಲಿನ ತನ್ನ ರಾಯಭಾರಿಯನ್ನು ಕರೆಸಿಕೊಂಡಿದೆ ಎಂದು ಪಾಕ್ ವಿದೇಶ ಕಾರ್ಯಾಲಯ ಮಾಹಿತಿ ನೀಡಿದೆ.

ದೆಹಯಲ್ಲಿನ ಪಾಕ್ ಹೈಕಮಿಶನರ್ ಸೊಹೇಲ್ ಮಹಮೂದ್ ಅವರನ್ನು ಪಾಕಿಸ್ತಾನ ಇಸ್ಲಾಮಾಬಾದ್ಗೆ ಕರೆಸಿಕೊಂಡಿದೆ. ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಅವರು ಇಸ್ಲಾಮಾಬಾದಿನಲ್ಲಿ ನಡೆಸಿದ ಸಾಪ್ತಾಹಿಕ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ದೆಹಯಲ್ಲಿನ ಪಾಕ್ ರಾಜತಂತ್ರಜ್ಞರಿಗೆ ಈಚೆಗೆ ಕಿರುಕುಳ ನೀಡಲಾದ ಘಟನೆಗಳ ಬಗ್ಗೆ ಸಮಾಲೋಚನೆ ನಡೆಸಲು ಪಾಕ್ ಸರಕಾರ ತನ್ನ ಹೈಕಮಿಶನರ್ ಅವರನ್ನು ಇಸ್ಲಾಮಾಬಾದ್ಗೆ ಕರೆಸಿಕೊಂಡಿದೆ ಎಂದು ವಕ್ತಾರ ಫೈಸಲ್ ತಿಳಿಸಿದ್ದಾರೆ.

ಭಾರತದಲ್ಲಿರುವ ಪಾಕ್ ರಾಜತಂತ್ರಜ್ಞರು ಮತ್ತು ಅವರ ಕುಟುಂಬದವರಿಗೆ ಭಾರತೀಯ ಸರಕಾರ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಪಾಕ್ ಸರಕಾರ ಈ ಬಗ್ಗೆ ಭಾರತೀಯ ಉಪ ಹೈಕಮಿಶನರ್ಗೆ ಮತ್ತು ವಿದೇಶ ಸಚಿವಾಲಯಕ್ಕೆ ಹಲವು ಬಾರಿ ಪ್ರತಿಭಟನೆ ಸಲ್ಲಿಸಿದ ಹೊರತಾಗಿಯೂ ಅದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಫೈಸಲ್ ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ