ಹೊಸ ಬ್ಯಾಂಕ್ ಖಾತೆ ತೆರೆಯಲು ಆಧಾರ ಸಲ್ಲಿಕೆ ಮುಂದುವರಿಕೆ

ನವದೆಹಲಿ,ಮಾ.15- ಹೊಸ ಬ್ಯಾಂಕ್ ಖಾತೆ ತೆರೆಯಲು ಅಥವಾ ತತ್ಕಾಲ್ ಪಾಸ್‍ಪೆÇೀರ್ಟ್‍ಗಳಿಗೆ ಆಧಾರ್ ಸಲ್ಲಿಕೆ ಮುಂದುವರಿಯಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರಕಾರ, ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ತತ್ಕಾಲ್ ಪಾಸ್ಪೋರ್ಟ್‍ಗಳಿಗೆ ಆಧಾರ್ ಸಲ್ಲಿಕೆಯನ್ನು ಮುಂದುವರಿಸಲಾಗಿದೆ ಎಂದು ಯುಐಡಿಎಐ ಟ್ವೀಟ್ ಮಾಡಿದೆ.

ಒಂದು ವೇಳೆ ಆಧಾರ್ ಇಲ್ಲದವರು ಆಧಾರ್‍ಗೆ ಅರ್ಜಿ ಸಲ್ಲಿಸಿ ಆ ಅರ್ಜಿಯ ನಂಬರ್ ಸಲ್ಲಿಸಬಹುದು ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ