ಬೆಂಗಳೂರು, ಮಾ.15-ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಸ್ಟೇಟಸ್‍ನಲ್ಲಿ ನಾಳೆ ಸರ್‍ಪ್ರೈಸ್ ಕಾದಿದೆ ಕಾದು ನೋಡಿ… ಎಂದು ಹಾಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಈ ಬಾರಿ ವಿರಾಜಪೇಟೆ ಕ್ಷೇತ್ರದಿಂದ ಬೇರೊಬ್ಬರಿಗೆ ಅದರಲ್ಲೂ ಯುವಕರಿಗೆ ಬಿಜೆಪಿ ಟಿಕೆಟ್ ಕೊಡಲಾಗುತ್ತದೆ ಎಂಬ ಮಾತು ಕೇಳಿ ಬಂದಿದೆ. ಇದೀಗ ಬೋಪಯ್ಯ ಅವರು ಈ ರೀತಿ ಸ್ಟೇಟಸ್ ಹಾಕಿರುವುದರಿಂದ ಅವರ ನಡೆ ಕುತೂಹಲಕಾರಿಯಾಗಿದೆ.
ಬೋಪಯ್ಯ ಅವರು ನಾಳೆ ತಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಜೊತೆಗೆ ಸರ್‍ಪ್ರೈಸ್ ಸ್ಟೇಟಸ್ ಹಾಕಿರುವುದರಿಂದ ಅವರೇನು ಬಿಜೆಪಿಯನ್ನು ಬಿಡುತ್ತಾರೆಯೇ? ಅಥವಾ ಬೇರೆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಯೇ? ಇಲ್ಲ, ತಟಸ್ಥರಾಗಿರುತ್ತಾರೆಯೋ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅವರು ಹೇಳಿರುವಂತೆ ಇದಕ್ಕೆಲ್ಲ ಉತ್ತರ ನಾಳೆ ಸಿಗಲಿದೆಯೇನೋ ಕಾದು ನೋಡಬೇಕು.