ಮೈಸೂರು, ಮಾ.15-ಮಾನಸಿಕ ಅಸ್ವಸ್ಥನೊಬ್ಬ ಫುಟ್ಪಾತ್ಗೆ ತಲೆಚಚ್ಚಿಕೊಂಡು ಸಾವನ್ನಪ್ಪಪಿರುವ ಘಟನೆ ನಗರದಲ್ಲಿಂದು ಬೆಳಗಿನ ಜಾವ ನಡೆದಿದೆ.
ನಗರದ ಒಂಟಿಕೊಪ್ಪಲಿನ ವಾಸಿ ಸೇಥೂ ಸಾವನ್ನಪ್ಪಿರುವ ವ್ಯಕ್ತಿ.
ಈತ ಇಂದು ಬೆಳಗಿನ ಜಾವ ಸುಮಾರು 4 ಗಂಟೆ ಸಮಯದಲ್ಲಿ ಶಿವರಾಮು ಎಂಬುವರ ಬಳಿ ಬಂದು ಇಲ್ಲಿ ಟ್ಯಾಕ್ಸಿ ಎಷ್ಟೊತ್ತಿಗೆ ಬರುತ್ತದೆ ಎಂದು ಕೇಳಿದ್ದಾರೆ. ಟ್ಯಾಕ್ಸಿ ಈ ವೇಳೆಗೆ ಬರುವುದಿಲ್ಲ ಎಂದು ಶಿವರಾಮು ಹೇಳಿದಾಗ ಸೇಥೂ ಅಲ್ಲಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಚಚ್ಚಿಕೊಂಡು ಅಲ್ಲಿಂದ ಮುಂದೆ ಹೋಗಿದ್ದಾನೆ. ಸಮೀಪದ ಹಾಲಿನ ಅಂಗಡಿ ಬಳಿ ಹೋಗಿ ಅಲ್ಲಿದ್ದವರನ್ನು ಏನೋ ಕೇಳಿ ಮತ್ತೆ ಅಲ್ಲಿ ತಲೆ ಚಚ್ಚಿಕೊಂಡಾಗ ಅಂಗಡಿಯವರು ಪೆÇಲೀಸರನ್ನು ಕರೆಯುವುದಾಗಿ ಹೇಳುತ್ತಿದ್ದಂತೆ ಶ್ರೀರಾಮಮಂದಿರದ ಬಳಿ ಹೋಗಿ ಫುಟ್ಪಾತ್ಗೆ ತಲೆ ಚಚ್ಚಿಕೊಂಡು ಬಿದ್ದಿದ್ದಾನೆ. ಈ ಬಗ್ಗೆ ವಿ.ವಿ.ಪುರಂ ಠಾಣೆ ಪೆÇಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕಾಗಮಿಸಿದ ಪೆÇಲೀಸರು ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಈತ ಸಾವನ್ನಪ್ಪಿದ್ದಾನೆ.
ಆತ ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದ ಎಂದು ಪೆÇಲೀಸರು ಹೇಳಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.