ಬೆಂಗಳೂರು, ೧೫ ಮಾರ್ಚ್ ೨೦೧೮: ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನು ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ರವರು ೨೦೧೮ ಸಾಲಿನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕುರಿತಾದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ನಗರದ ಕೇಶವ ಶಿಲ್ಪಾ ರಾಷ್ಟ್ರೋತ್ಥಾನದ ಸಭಾಂಗಣದಲ್ಲಿ ನೆರೆದಿದ್ದ ಪತ್ರಕರ್ತರೊಂದಿಗೆ ಸಂಘ ಕಾರ್ಯದ ವರದಿ ಹಾಗೂ ಅಂಕಿ ಅಂಶಗಳನ್ನು ಹಂಚಿಕೊಂಡರು. ಆ ಅಂಕಿ ಅಂಶಗಳನ್ನು ಕೆಳಗೆ ನೀಡಲಾಗಿದೆ. ಪ್ರತಿನಿಧಿ ಸಭಾದಲ್ಲಿ ಭಾರತೀಯ ಭಾಷೆಗಳ ಕುರಿತಾಗಿ ತೆಗೆದುಕೊಂಡಿರುವ ನಿರ್ಣಯವನ್ನು ಇಲ್ಲಿ ಓದಬಹುದು. ಈ ಬಗ್ಗೆಯೂ ನಾಗರಾಜರವರು ಪತ್ರಕರ್ತರೊಂದಿಗೆ ಹಂಚಿಕೊಂಡರು. ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಮೈಸೂರು, ವಿಶ್ವ ಸಂವಾದ ಕೇಂದ್ರದ ಸಂಯೋಜಕ ಶ್ರೀ ಪ್ರವೀಣ್ ಪಟವರ್ಧನ್ ಉಪಸ್ಥಿತರಿದ್ದರು. ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಪರ್ಕ ಪ್ರಮುಖರಾದ ಶ್ರೀ ವೆಂಕಟೇಶ ಟಿ ಎಸ್ ಸಹ ಉಪಸ್ಥಿತರಿದ್ದರು.
ಸಂಘ ಕಾರ್ಯದ ವರದಿ:
2017-18 ಸಾಲಿನ ಸಂಘ ಶಿಕ್ಷಾ ವರ್ಗಗಳ ವರದಿ:
ವರ್ಷ | ಸ್ಥಳಗಳು | ಒಟ್ಟು ಭಾಗವಹಿಸಿದವರ ಸಂಖ್ಯೆ | ವಿಶೇಷ | ಸ್ಥಳಗಳು | ಒಟ್ಟು ಭಾಗವಹಿಸಿದವರ ಸಂಖ್ಯೆ |
ಪ್ರಥಮ | 9734 | 15716 | ಪ್ರಥಮ (ವಿಶೇಷ) | 2146 | 3012 |
ದ್ವಿತೀಯ | 2959 | 3796 | |||
ತೃತೀಯ | 834 | 899 | ತೃತೀಯ (ವಿಶೇಷ) | 697 | 716 |
2017-18 ಸಾಲಿನ ಪ್ರಾಥಮಿಕ ಶಿಕ್ಷಾ ವರ್ಗಗಳ ವರದಿ:
ವರ್ಷ | ಒಟ್ಟು ವರ್ಗಗಳ ಸಂಖ್ಯೆ | ಶಾಖೆಗಳು | ಒಟ್ಟು ಭಾಗವಹಿಸಿದವರ ಸಂಖ್ಯೆ |
2016-17 | 1059 | 29127 | 104256 |
2017-18 | 1180 | 27814 | 95318 |
2017-18 ಸಾಲಿನ ಶಾಖೆಗಳ ವರದಿ:
ವರ್ಷ | ಸ್ಥಳಗಳು | ಶಾಖೆಗಳು | ಮಿಲನ್‍ಗಳು | ಮಂಡಳಿ |
2017 | 36729 | 57165 | 14986 | 7594 |
2018 | 37190 | 58967 | 16405 | 7976 |
ಶಾಖೆಗಳ ಶೇಕಡ ಹೆಚ್ಚಳ :
ವರ್ಷ | ಶಾಖೆಗಳ ಸಂಖ್ಯೆ | ಶಾಖೆಗಳ ಶೇಕಡ ಹೆಚ್ಚಳ | ಪ್ರತಿನಿಧಿ ಸಭೆ ನಡೆದ ಸ್ಥಳ |
2011 | 39,908 | – | ಪುತ್ತೂರು, ಕರ್ನಾಟಕ |
2012 | 40,891 | 2.46% | ನಾಗಪುರ |
2013 | 42,981 | 5.10% | ಜಯಪುರ, ರಾಜಸ್ಥಾನ |
2014 | 44,982 | 4.66% | ಬೆಂಗಳೂರು |
2015 | 51,330 | 14.11% | ನಾಗಪುರ |
2016 | 56,569 | 10.21% | ನಾಗೌರ್, ರಾಜಸ್ಥಾನ |
2017 | 57,165 | 1.05% | ಕೊಯಂಬತ್ತೂರು |
2018 | 58,967 | 3.15% | ನಾಗಪುರ |
ಕರ್ನಾಟಕ ರಾಜ್ಯದ ಶಾಖಾ ಅಂಕಿ ಅಂಶಗಳು 2017-18
ಪ್ರಾಂತ | ಸ್ಥಳಗಳು | ನಿತ್ಯ ಶಾಖಾಗಳು | ಸಾಪ್ತಾಹಿಕ ಮಿಲನ್ | ಮಾಸಿಕ ಮಂಡಲಿ |
ಕರ್ನಾಟಕ ದಕ್ಷಿಣ | 1956 | 3454 | 628 | 140 |
ಕರ್ನಾಟಕ ಉತ್ತರ | 747 | 1095 | 192 | 125 |