ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವಜ್ರಮಹೋತ್ಸವ: ಮಾ.16ರಂದು ರಾಷ್ಟ್ರಮಟ್ಟದ ಅಧಿವೇಶನ

ಬೆಂಗಳೂರು,ಮಾ.14- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವಜ್ರಮಹೋತ್ಸವದ ಅಂಗವಾಗಿ ಮಾ.16ರಂದು ರಾಷ್ಟ್ರಮಟ್ಟದ ಅಧಿವೇಶನವನ್ನು ನವದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಆರ್‍ಪಿಐನ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು, ರಾಜ್ಯಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದು, ಬೆಳಗ್ಗೆ 11 ಗಂಟೆಗೆ ಪ್ರತಿನಿಧಿಗಳ ನೋಂದಣಿ ಮತ್ತು 1 ಗಂಟೆಗೆ ರಾಷ್ಟ್ರ ಪ್ರತಿನಿಧಿಗಳ ಮಹಾಸಭೆಯು ನಡೆದು ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಪಕ್ಷದ ಹಿರಿಯ ಮುಖಂಡ ಸೋನಾವನೆಯವರು ಚುನಾವಣಾಧಿಕಾರಿಯ ಕಾರ್ಯ ನಿರ್ವಹಿಸಲಿದ್ದು , ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಅಧ್ಯಕ್ಷರ ಹೆಸರು ಮತ್ತು ರಾಷ್ಟ್ರೀಯ ರಾಜ್ಯಕಾರಣಿ ಸದಸ್ಯರ ಹೆಸರುಗಳನ್ನು ಮಧ್ಯಾಹ್ನ 3 ಗಂಟೆಗೆ ಸಭೆಯಲ್ಲಿ ಘೋಷಣೆ ಮಾಡಲಿದ್ದಾರೆ.

ರಾಷ್ಟ್ರಮಟ್ಟದ ಮುಖಂಡರಾದ ರಾಂವಿಳಾಸ್ ಪಾಸ್ವನ್,ಡಾ. ಉದಿತ್‍ರಾಜ್, ತಮಿಳುನಾಡಿನ ತಿರುಮವಳಿವನ ಡಾ.ಕೃಷ್ಣಸ್ವಾಮಿ ಮುಂತಾದವರು ಭಾಗವಹಿಸ್ದಾರೆ ಎಂದರು.

ಮಾ.4ರಂದು ಯಶವಂತಪುರದಿಂದ ಪ್ರಾರಂಭವಾಗಿರುವ ಜನಾಧಿಕಾರಕ್ಕಾಗಿ ಜನಸಂಕಲ್ಪ ಜಾಥಾವು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುತ್ತಾ ನಗರದ ಮತದಾರ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿದಿನ ಬಹಿರಂಗ ಸಭೆಗಳನ್ನು ನಡೆಸುತ್ತಿದುದ ಏ.8ರಂದು ನ್ಯಾಷನಲ್ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದರು.

ಡಾ.ಎಂ.ವೆಂಕಟಸ್ವಾಮಿ ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಅಧ್ಯಕ್ಷ ರಾಂದಾಸ್ ಅರಂಲೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ