ಬೆಂಗಳೂರು, ಮಾ.14- ಕನ್ನಡ ರಂಗಭೂಮಿಯಲ್ಲಿ ನಿರಂತರವಾಗಿ ತನ್ನದೇ ಆದ ವಿಭಿನ್ನ ರೀತಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ರಂಗಕಾಯಕ ಮಾಡುತ್ತಿರುವ ಗೆಜ್ಜೆ-ಹೆಜ್ಜೆ ರಂಗತಂಡವು ಮಾ.16ರಿಂದ 18ರ ವರೆಗೆ ಮೂರು ದಿನಗಳ ಕಾಲ ಮೈಸೂರು ರಮಾನಂದ್ ನಿರ್ದೇಶನದ ನಾಟಕಗಳ ಪ್ರದರ್ಶನ ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಮೂರು ದಿನಗಳ ಕಾಲ ಪ್ರತಿದಿನ ಸಂಜೆ 5.30ರಿಂದ ರಂಗ ಸಂಗೀತ, ರಂಗೋಪನ್ಯಾಸ ಹಾಗೂ ಮೈಸೂರು ರಮಾನಂದ್ ನಿರ್ದೇಶನದ ನಾಟಕಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಪ್ರದರ್ಶನವು ಉಚಿತವಾಗಿದ್ದು, ರಂಗಾಸಕ್ತರು, ರಂಗ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೆÇ್ರೀ ರಂಗತಂಡ ಮನವಿ ಮಾಡಿದೆ.
ರಂಗಯ್ಯನ ರಾದ್ಧಾಂತ: ಮೈಸೂರು ರಮಾನಂದ್ ರಚಿಸಿರುವ ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ಕುಡಿತಾಯಣ ಮತ್ತು ಕಂಡಕ್ಟರ್ ಗಂಗರಾಜು ವಿರಚಿತ ರಂಗಯ್ಯನ ರಾದ್ಧಾಂತ ನಾಟಕವನ್ನು ಮಾ.19ರಂದು ಮಲ್ಲೇಶ್ವರಂನ ಸೇವಾಸದನದ ರಂಗವೇದಿಕೆಯಲ್ಲಿ ಏರ್ಪಡಿಸಲಾಗಿದೆ.
ಹಾಸ್ಯದ ರಸದೌತಣ, ಅರಿವಿನ ಹೂರಣದ, ನಗೆಯ ಹಾಸ್ಯದ ಕುಲುಕು ಸಾಮರಸ್ಯದ ಬೆಳಕು ಚೆಲ್ಲುವ ಈ ಎರಡು ನಾಟಕಗಳು ಕಲಾಸಕ್ತರನ್ನು ರಂಜಿಸುವುದಂತೂ ನಿಶ್ಚಿತ.
ಸಂಚಾರಿ ಶ್ರವಣ ಪುಂಗಿ ಪುರಾಣ: ಜಗತ್ತಿನ ದಿವ್ಯ ಸಾಧಕರ ಸಂದೇಶಗಳನ್ನು ಕೈಗೆಟಕಿಸಿ ಮನಸ್ಸಿಗೆ ಶಾಂತಿ ತರುವ ಮೊಬೈಲ್ ಒಂದೇ ಎರಡೇ. ಮೊಬೈಲ್ನ ಸಾಮಥ್ರ್ಯ ಮೊಬೈಲ್ ಲೋಕದಲ್ಲಿ ಹುಟ್ಟುವ ನಗೆಬುಗ್ಗೆಗಳನ್ನು ತುಂಬಿಕೊಂಡು ತಂದು ಸುರಿಯುವ ಮೈಸೂರು ರಮಾನಂದ್ ಬರೆದಾಡಿಸುವ ಹಾಸ್ಯ ನಾಟಕ ಮೊಬೈಲಾಯಣ ಅರ್ಥಾತ್ ಸಂಚಾರಿ ಶ್ರವಣ ಪುಂಗಿ ಪುರಾಣ ನಾಟಕವು ಮಾ.22ರಂದು ಮಲ್ಲೇಶ್ವರದ ಸೇವಾ ಸದನದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.