ವಿಶಾಖಪಟ್ಟಣಂ, ಮಾ.13-ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಆಂಧ್ರಪ್ರದೇಶದ ವಿಶಾಖಪಟ್ಟಣ ಪೆÇಲೀಸರು ಜಪ್ತಿ ಮಾಡಲಾದ 7 ಕೋಟಿ ರೂ. ಮೌಲ್ಯದ ಗಾಂಜಾವನ್ನು ಸುಟ್ಟು ಹಾಕಿದ್ದಾರೆ.
ಕಲ್ಯಾಣಪುಲೋವಾ ಪ್ರದೇಶದಲ್ಲಿ ಇಂದು ಮಾದಕ ವಸ್ತು ವಿಲೇವಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಈ ಭಾರಿ ಪ್ರಮಾಣದ ಗಾಂಜಾವನ್ನು ಭಸ್ಮ ಮಾಡಲಾಗಿದೆ ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೆÇಲೀಸ್ ವರಿಷ್ಠಾಧಿಕಾರಿ(ವಿಶಾಖಪಟ್ಟಣ ಗ್ರಾಮಾಂತರ) ರಾಹುಲ್ ದೇವ್ ಶರ್ಮಾ ಮತ್ತು ಇತರ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಕೋತಾಕೋಟಾ, ರೋಲುಗುಂಟ ಮತ್ತು ಮಕವರಪಾಳಂ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ 65 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 7 ಕೋಟಿ ರೂ. ಬೆಲೆಬಾಳುವ ಗಾಂಜಾವನ್ನು ನ್ಯಾಯಾಲಯದ ಅಗತ್ಯ ಅನುಮತಿ ಪಡೆದ ನಂತರ ಸುಟ್ಟು ಹಾಕಲಾಗಿದೆ ಎಂದು ಪೆÇಲೀಸ್ ಮಹಾ ನಿರೀಕ್ಷಕ ಶ್ರೀಕಾಂತ್ ತಿಳಿಸಿದ್ದಾರೆ. ಗಾಂಜಾ ಕಳ್ಳಸಾಗಣೆಗೆ ಕಡಿವಾಣ ಹಾಕುವ ಮೂಲಕ ಕಿಂಗ್ಪಿನ್ಗಳನ್ನು ಮಟ್ಟ ಹಾಕುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.