ದಾವಣಗೆರೆ, ಮಾ.14- ಪ್ರತಿಷ್ಠಿತ ಜವಳಿ ಅಂಗಡಿಯಾದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆಗಳು ಹಾಗೂ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಮಳಿಗೆ ಮಾಲೀಕರು ತೆರಿಗೆ ಕಟ್ಟದೆ ವಂಚಿಸಿದ್ದಾರೆಂಬ ಆರೋಪ ಕೇಳಿಬರುತ್ತಿತ್ತು. ಈ ನಡುವೆ ಇಂದು ಬೆಳಗ್ಗೆ ಬೆಂಗಳೂರು ಹಾಗೂ ದಾವಣಗೆರೆಯ ಐಟಿ ಅಧಿಕಾರಿಗಳು ಏಕಾಏಕಿ ಜವಳಿ ವರ್ತಕರಾದ ಉಮಾಪತಿ, ಸಹೋದರ ಶಿವಕುಮಾರ್ ಅವರಿಗೆ ಸೇರಿದ ಜವಳಿ ಮಳಿಗೆಗಳು ಹಾಗೂ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಜವಳಿ ವರ್ತಕರಾದ ಇವರು ನಾಲ್ಕೈದು ಮಳಿಗೆಗಳನ್ನು ಹೊಂದಿದ್ದಾರೆ. ಐಟಿ ಅಧಿಕಾರಿಗಳು ಟಿಜೆ ಬಡಾವಣೆ ಇವರ ಮನೆಗಳ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.