![ias d randeep](http://kannada.vartamitra.com/wp-content/uploads/2018/03/ias-d-randeep-677x381.jpg)
ಹಾಸನ, ಮಾ14- ಹಾಸನ ಜಿಲ್ಲಾಧಿಕಾರಿ ಅವರ ವರ್ಗಾವಣೆ ಆದೇಶಕ್ಕೆ ಸರ್ಕಾರ ತಡೆ ನೀಡಿರುವ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಡಿ.ರಂದೀಪ್ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಮೈಸೂರು ಡಿಸಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಇತ್ತ ಮೈಸೂರಲ್ಲೂ ಇರಲಾಗದೆ, ಹಾಸನಕ್ಕೂ ತೆರಳಲಾಗದಂತ ಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಡಿಪಿಎಆರ್ಗೆ ಎರಡು ಪತ್ರವನ್ನು ಐಎಎಸ್ ಅಧಿಕಾರಿ ರಂದೀಪ್ ಬರೆದಿದ್ದರೂ ಹಿರಿಯ ಅಧಿಕಾರಿಗಳು ಇವರ ಪತ್ರಕ್ಕೆ ಸ್ಪಂದಿಸದಿರುವುದು ಬೇಸರದ ಸಂಗತಿ.
ಸರ್ಕಾರ ಇತ್ತೀಚೆಗೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಹಾಸನ ಡಿಸಿ ಆಗಿ ರಂದೀಪ್ ಅವರನ್ನು ವರ್ಗಾಯಿಸಲಾಗಿತ್ತು. ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿಗೆ ವರ್ಗಾಯಿಸಿತ್ತು. ತದನಂತರ ರೋಹಿಣಿ ಅವರ ವರ್ಗಾವಣೆ ಆದೇಶಕ್ಕೆ ಸರ್ಕಾರ ತಡೆಯಾಜ್ಞೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿಯವರು ಹಾಸನ ಡಿಸಿ ಆಗಿಯೇ ಮುಂದುವರೆದಿರುವುದರಿಂದ ರಂದೀಪ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ.