ಮುಂಬೈ, ಮಾ.14-ದೇಶದ ವಿಮಾನಯಾನ ಕಾವಲು ಸಂಸ್ಥೆ-ಡಿಜಿಸಿಎ ಸುರಕ್ಷಿತ ಸೂಚನೆ ಹಿನ್ನೆಲೆಯಲ್ಲಿ ಇಂಡಿಗೋ ಮತ್ತು ಗೋಏರ್ ವಿಮಾನ ಸಂಸ್ಥೆಗಳು ಮೂರನೇ ದಿನವಾದ ಇಂದೂ ಕೂಡ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಇಂದು 50 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇಂಡಿಗೋ ಇಂದು ತನ್ನ 44 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಮುಂಬೈ, ಕೊಲ್ಕತಾ, ಪುಣೆ, ಜೈಪುರ್, ಶ್ರೀನಗರ, ಭುವನೇಶ್ವರ್, ಚೆನ್ನೈ, ದೆಹಲಿ, ಡೆಹ್ರಾಡೂನ್, ಅಮೃತ್ಸರ್, ಬೆಂಗಳೂರು ಮತ್ತು ಹೈದರಾಬಾದ್ಗೆ ತೆರಳಬೇಕಿದ್ದ ವಿಮಾನಗಳು ಇದು ಕಾರ್ಯನಿರ್ವಹಿಸಲಿಲ್ಲ. ಗೋಏರ್ನ ವಿಮಾನಗಳ ಸಂಚಾರ ರದ್ದುಗೊಂಡಿವೆ.
ಇಂಡಿಗೋ ವಿಮಾನ ಪ್ರತಿದಿನ ಸುಮಾರು 1,000 ಹಾಗೂ ಗೋಏರ್ ದಿನಂಪ್ರತಿ 230 ವಿಮಾನಗಳ ಸಂಚಾರ ಸೇವೆಗಳನ್ನು ಒದಗಿಸುತ್ತದೆ. ಆದರೆ ಈ ಸಂಸ್ಥೆಗಳ ಒಟ್ಟು 11 ಎ-320 ನಿಯೋ ವಿಮಾನಗಳ ಎಂಜಿನ್ಗಳಲ್ಲಿ ದೋಷ ಕಂಡಬಂದ ಹಿನ್ನೆಲೆಯಲ್ಲಿ ನಿನ್ನೆ 65 ವಿಮಾನಗಳು ಹಾರಾಟವನ್ನು ರದ್ದುಗೊಳಿಸಲಾಗಿದೆ. ಕೆಲವು ವಿಮಾನಗಳು ಗಗನದಲ್ಲಿ ಹಾರಾಟದಲ್ಲಿದ್ದಾಗಲೇ ಎಂಜಿನ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಡಿಜಿಸಿಎ ನಿರ್ದೇಶನದ ಮೇರೆಗೆ ಮೂರನೇ ದಿನವೂ ಸಂಚಾರ ರದ್ದಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.