ಹಣಕಾಸಿನ ವಿಷಯಕ್ಕೆ ವೈದ್ಯ ಕೊಲೆ

ಹುಬ್ಬಳ್ಳಿ,ಮಾ.14- ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆಯಾಗಿರುವ ವೈದ್ಯನ ಶವ ತಾಲೂಕಿನ ಇಂಗಳಳ್ಳಿ ಗ್ರಾಮದ ಹೊರವಲಯದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ವೈದ್ಯ ಡಾ ಬಾಬು ಹಂಡೇಕಾರ ಅವರ ಶವ ಇದಾಗಿದ್ದು ಅವರ ಅಳಿಯನಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಎರಡು ದಿನಗಳ ಹಿಂದೆ ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಸ್ನೇಹಿತರಿಗೆ ಕಳುಹಿಸಿರುವ ವಾಟ್ಸಪ್ ಸಂದೇಶ ಸಹ ಲಭ್ಯವಾಗಿದೆ.

ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ನಗರದ ಶುಶ್ರೂತ ನರ್ಸಿಂಗ್ ಹೋಮ್ ನಿರ್ದೇಶಕ ಡಾ. ಬಾಬು ಹಂಡೇಕರ್ ತಮ್ಮ ಅಳಿಯನಿಗೆ 50 ಲಕ್ಷ ಕೊಟ್ಟಿದ್ದು ಹಣ ಮರಳಿ ಕೇಳಿದ್ದಕ್ಕೆ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ನಂತರ ನಾಪತ್ತೆಯಾಗಿರುವ ವೈದ್ಯರು ಎಲ್ಲಿ ಇದ್ದಾರೆ ಎಂಬುದು ಗೊತ್ತಾಗಿರಲಿಲ್ಲ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈಗಾಗಲೇ ವಿದ್ಯಾನಗರ ಠಾಣೆ ಪೆÇಲೀಸರು ಆರೋಪಿ ನವೀನ್ ಮುಲ್ಕಿಗೌಡರ್ ಹಾಗೂ ಸಹಚರರ ವಿಚಾರಣೆ ಮುಂದುವರೆಸಿದ್ದು, ಯಾರು ಯಾರು ಕೊಲೆಯಲ್ಲಿ ಬಾಗಿಯಾಗಿದ್ದಾರೆ ಎಂಬ ಬಗ್ಗೆ ಸಹ ತನಿಖೆ ನಡೆಸಲಾಗುತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ