ಕಾಶ್ಮೀರ ಕುರಿತಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಜಮ್ಮು – ಕಾಶ್ಮೀರದ ಹಣಕಾಸು, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ.ಹಸೀಬ್ ಡ್ರಾಬು ಅವರನ್ನು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಚಿವ ಸಂಪುಟದಿಂದ ಕೈಬಿಟ್ಟಿದ್ದಾರೆ. ದೆಹಲಿಯಲ್ಲಿ ಈ ತಿಂಗಳ 9ರಂದು ನಡೆದ ಪಿಎಚ್‍ಡಿಸಿಸಿಐ ಕಾರ್ಯಕ್ರಮದಲ್ಲಿ ಕಾಶ್ಮೀರ ವಿಷಯ ರಾಜಕೀಯ ವಿಷಯವಲ್ಲ, ಆದರೆ ಇದು ಸಾಮಾಜಿಕ ವಿಷಯ ಎಂದು ಡ್ರಾಬು ಹೇಳಿದ್ದಾರೆ. ರಾಜ್ಯಪಾಲರ ಶಿಫಾರಸ್ಸಿನಂತೆ ರಜ್‍ಪೋರ ಕ್ಷೇತ್ರದ ಪಿಡಿಪಿ ಶಾಸಕ ಡ್ರಾಬು ಅವರನ್ನು ಮುಖ್ಯವಾಗಿ ಕೈಬಿಟ್ಟಿದ್ದಾರೆ. ಡ್ರಾಬು ಅವರ ಖಾತೆಗಳನ್ನು ಮುಖ್ಯಮಂತ್ರಿ ಅವರೇ ತಮೊ ್ಮಂದಿಗೆ ಇರಿಸಿಕೊಂಡಿದ್ದಾರೆ.