ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿನ ಸರಾಸರಿ ಮಾಸಿಕ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಸಂದರ್ಭದಲ್ಲಿ ವಿಧಿಸಲಾಗುವ ಶುಲ್ಕವನ್ನು ಶೇಕಡಾ 75ರವರೆಗೆ ಇಳಿಕೆ ಮಾಡಿದ್ದು, ಇದು ಮುಂದಿನ ತಿಂಗಳ 1ರಿಂದ ಅನ್ವಯವಾಗಲಿದೆ. ಮೆಟ್ರೋ ಮತ್ತು ನಗರ ಕೇಂದ್ರಗಳಲ್ಲಿದ್ದ ಮಾಸಿಕ ಗರಿಷ್ಠ 50 ರೂಪಾಯಿ ಹಾಗೂ ಜಿಎಸ್‍ಟಿ ತೆರಿಗೆಯನ್ನು ಈಗ ಮಾಸಿಕ 15 ರೂಪಾಯಿ ಮತ್ತು ಜಿಎಸ್‍ಟಿ ತೆರಿಗೆಗೆ ನಿಗದಿಪಡಿಸಲಾಗಿದೆ, ಇದರಿಂದ ಸುಮಾರು 25 ಕೋಟಿ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗಲಿದೆ