ನಾಗತಿಹಳ್ಳಿ ಸಂಸ್ಕøತಿ ಹಬ್ಬದ 14ನೇ ವಾರ್ಷಿಕೋತ್ಸವ

ಬೆಂಗಳೂರು,ಮಾ.13- ನಾಗತಿಹಳ್ಳಿ ಸಂಸ್ಕøತಿ ಹಬ್ಬದ 14ನೇ ವಾರ್ಷಿಕೋತ್ಸವದ ಅಂಗವಾಗಿ ಮಾ.16ರಿಂದ 18ರವರೆಗೆ ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿ ಶಾಲಾ ಆವರಣದಲ್ಲಿರುವ ಸಿಹಿ ಕನಸು ರಂಗಮಂದಿರ-ನಾಗತಿಹಳ್ಳಿ ಸಂಸ್ಕøತಿ ಭವನದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
16ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಎಂಡೋಕ್ರಿನಾಲಜಿ ಮತ್ತು ಡಯಾಬಿಟಿಸ್ ಸಂಶೋಧನಾ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. 17ರಂದು ರೈತ ಚಿಂತನೆಗಳ ಬಗ್ಗೆ ಕವಿಗೋಷ್ಠಿ ಏರ್ಪಡಿಸಿದ್ದು,ನಮ್ಮ ಕೆರೆಗಳು ಮತ್ತು ಐತಿಹ್ಯ ಇದರ ಬಗ್ಗೆ ಉಪನ್ಯಾಸ ಮತ್ತು ವಿಡಿಯೋ ಪ್ರದರ್ಶನವಿರುತ್ತದೆ. 18ರಂದು ಯುಗಾದಿ ಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆಕನ್ನಡ ಭಾವಗೀತೆ ಕಲಿಕಾ ಶಿಬಿರ, ಕನ್ನಡ ಗೀತೆಗಳ ಗಾಯನ, ಬೀದಿ ನಾಟಕಗಳನ್ನು ಆಯೋಜಸಲಾಗಿದೆ. ಸಂಜೆ 4 ಗಂಟೆಗೆ ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ವಿದ್ಯಾರ್ಥಿಗಳಿಂದ ಸಂಸ್ಕøತಿ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಂಜೆ 7ಕ್ಕೆ ಸಮಾರೋಪ ಸಮಾರಂಭವನ್ನು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್, ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಕುಲಪತಿ ಪೆÇ್ರ.ಕಟ್ಟಿಮನಿ, ಸಾವಯವ ಕೃಷಿ ತಜ್ಞ ನಾಡೋಜ ನಾರಾಯಣರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ