ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ ಸಂಸದೆ

ನವದೆಹಲಿ, ಮಾ.13-ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ, ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಯಾ ಹೊಂದಿರುವ ಆಸ್ತಿ-ಪಾಸ್ತಿಗಳ ಒಟ್ಟು ಮೌಲ್ಯ 1,000 ಕೋಟಿ ರೂ.ಗಳು.

2004ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗುವಾಗ 800 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾ ಅವರ ದಾಖಲೆಯನ್ನು ಜಯಾಬಚ್ಚನ್ ಅಳಿಸಿ ಹಾಕಿದ್ದಾರೆ. ಕಳೆದ ಶುಕ್ರವಾರ ತಮ್ಮ 1,000 ಕೋಟಿ ರೂ.ಗಳ ಆಸ್ತಿಯನ್ನು ಜೆಬಿ ಘೋಷಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಅತ್ಯಂತ ಶ್ರೀಮಂತ ಸಂಸದೆ ಎಂದು ಗುರುತಿಸಿಕೊಂಡಿದ್ದಾರೆ. ಜಯಾ ಆಸ್ತಿ ಏನೇನು..? ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಜಯಾ 2012ರಲ್ಲಿ 493 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಈಗ ಅದು ಎರಡು ಪಟ್ಟು ಹೆಚ್ಚಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಪ್ರಕಾರ, ಜಯಾ ಮತ್ತು ಅಮಿತಾಭ್ ಬಚ್ಚನ್ ಅವರ ಸ್ಥಿರಾಸ್ತಿ ಮೌಲ್ಯ 460 ಕೋಟಿ. 2012ರಲ್ಲಿ ಅವರು ಘೋಷಿಸಿಕೊಂಡಿದ್ದ 152 ಕೋಟಿ ರೂ.ಗಳ ಮೌಲ್ಯಕ್ಕಿಂತಲೂ ಮೂರುಪಟ್ಟು ಅಧಿಕ. ಅವರ ಪ್ರಸ್ತುತ ಚರಾಸ್ತಿ ಮೌಲ್ಯ 540 ಕೋಟಿ. 2012ರಲ್ಲಿ ಇದು 343 ಕೋಟಿ ರೂ.ಗಳಷ್ಟಿತ್ತು.

ಬಚ್ಚನ್ ದಂಪತಿ 62 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದು, ಇದರಲ್ಲಿ ಅಮಿತಾಭ್ 36 ಕೋಟಿ ರೂ. ಮತ್ತು ಜಯಾ 26 ಕೋಟಿ ರೂ. ಪಾಲು ಹೊಂದಿದ್ದಾರೆ. ಈ ಸ್ಟಾರ್ ಕಪಲ್ ಬಳಿ 13 ಕೋಟಿ ರೂ. ಬೆಲೆಬಾಳುವ 12 ಲಕ್ಸುರಿ ವಾಹನಗಳಿವೆ. ಅವುಗಳೆಂದರೆ : ಒಂದೊಂದು ರೋಲ್ಸ್‍ರಾಯ್ಸ್, ಪೆÇೀಶ್ಚೆ, ರೇಂಜ್ ರೋವರ್ ಮತ್ತು ಮೂರು ಮರ್ಸಿಡಿಸ್ ಬೆಂಜ್ ಕಾರುಗಳಿವೆ. ಅಮಿತಾಭ್ ಟಾಟಾ ನ್ಯಾನೋ ಮತ್ತು ಟ್ರ್ಯಾಕ್ಟರ್ ಸಹ ಹೊಂದಿದ್ದಾರೆ.

ಲಂಬೂಜಿ ಬಳಿ 3.4 ಕೋಟಿ ರೂ. ಮೌಲ್ಯದ ದುಬಾರಿ ಕೈಗಡಿಯಾರಗಳು, ಗುಡ್ಡಿ ಖ್ಯಾತಿಯ ಜಯಾ ಬಳಿ 51 ಲಕ್ಷ ರೂ. ಬೆಲೆಬಾಳುವ ವಾಚುಗಳಿವೆ. ಬಚ್ಚನ್ 9 ಲಕ್ಷ ರೂ. ಮೌಲ್ಯದ ದುಬಾರಿ ಪೆನ್ ಹೊಂದಿದ್ಧಾರೆ. ಮೆಗಾಸ್ಟಾರ್ ಹೆಸರಿನಲ್ಲಿ ಫ್ರಾನ್ಸ್‍ನ ಬ್ರಿಂಗ್‍ನೋಗಾನ್ ಪ್ಲಾಗ್ ಪ್ರದೇಶದಲ್ಲಿ 3175 ಚ. ಅಡಿ. ಭವ್ಯ ಬಂಗಲೆ ಇದೆ. ಮುಂಬೈ ಅಲ್ಲದೇ ಪುಣೆ, ನೊಯ್ಡಾ, ಭೋಪಾಲ್, ಅಹಮದಾಬಾದ್, ಗಾಂಧಿನಗರ ಮೊದಲಾದ ಸ್ಥಳಗಳಲ್ಲಿ ಸಮೃದ್ಧ ಆಸ್ತಿಯ ಒಡೆಯರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ