ಕಟ್ಮಂಡು:ಮಾರ್ಚ್ -13: ನೆನ್ನೆ ಸಂಭವಿಸಿದ ವಿಮಾನ ದುರಂತದ ಬಗ್ಗೆ ವಿವರ ಪಡೆಯಲು ಭಾಂಗ್ಲಾ ದೇಶದಿಂದ ಉನ್ನತ ಮಟ್ಟದ ನಿಯೋಗ ಇಂದು ಕಟ್ಮಂಡುವಿಗೆ ಆಗಮಿಸಿತು. ಈ ನಿಯೋಗದಲ್ಲಿ ಭಾಂಗ್ಲ ದೇಶದ ವಿಮಾನಯಾನ ಸಚಿವ, ಷಹಜಾನ್ ಕಮಲ್, ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಷಹರಿಯಾರ್ ಅಲಮ್ ಮತ್ತು ಸರ್ಕಾರಿ ಆಧಿಕಾರಿಗಳ ನಿಯೋಗ ಕಟ್ಮಂಡುವಿಗೆ ಆಗಮಿಸಿತು. ಈ ನಿಯೋಗವು ಕಟ್ಮಂಡು ಅಂತಾರಾಷ್ಟ್ರೀಯ ನಿಲ್ದಾಣದ ಅಧಿಕಾರಿಗಳ ಜೊತೆ ಮಾತನಾಡಿ ಘಟನೆಗೆ ಸಂಭಂದಿಸಿದಂತೆ ವಿವರಗಳನ್ನು ಪಡೆಯಿತು. ಇದಕ್ಕೂ ಮೊದಲು ಘಟನೆ ನೆಡೆದ ದಿನ, ಅಂದರೆ ಸೋಮವಾರವೇ ನೇಪಾಳದ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಓಲಿ ಭಾಂಗ್ಲಾ ದೇಶದ
ಪ್ರಧಾನಿ ಮಂತ್ರಿ ಶೇಕ್ ಹಸೀನ ಜೊತೆ ಪೋನ್ ಮೂಲಕ ಘಟನೆ ಬಗ್ಗೆ ಮಾತನಾಡಿದ್ದರು.