ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜೋಂಗ್ ಅನ್ ನಡುವೆ ಮಾತುಕತೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೋಂಗ್ ಅನ್ – ನಡುವೆ ನಿರ್ದಿಷ್ಟವಾಗಿ ಕ್ಷಿಪಣಿಗಳು ಮತ್ತು ಅಣ್ವಶ್ತ್ರ ಪರೀಕ್ಷೆಗೆ ಸಂಬಂಧಿಸಿದ ಯೋಜನೆಗಳ ಕುರಿತ ಮಾತುಕತೆ ನಡೆಯಲಿದೆ ಎಂದು ಶ್ವೇತಭವನ ತಿಳಿಸಿದೆ. ಉತ್ತರ ಕೊರಿಯಾದಲ್ಲಿ ಗರಿಷ್ಠ ಮಟ್ಟದ ಕಾರ್ಯಾಚರಣೆ ಕಾರ್ಯನಿರ್ವಹಿಸುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸರಾಹ್ ಸ್ಟಾಂಡರ್ಸ್ ಹೇಳಿದ್ದಾರೆ. ಈ ಮಧ್ಯೆ ನ್ಯೂಯಾರ್ಕಿನಲ್ಲಿ ಯು.ಎಸ್.ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್.ಮ್ಯಾಕ್ ಮಾಸ್ಟರ್ ಮತ್ತು ಯುಎಸ್.ನ ರಾಯಭಾರಿ ನಿಕ್ಕೆ ಹ್ಯಾವೆ ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಹಾಗೂ ಯು.ಎನ್. ಭದ್ರತಾ ಮಂಡಳಿ ಸದಸ್ಯರ ವಿವರವನ್ನು ವಿವರಿಸಿದರು. ಸಭೆಯಲ್ಲಿ ಅವರು ಉತ್ತರ ಕೊರಿಯಾದ ಆಡಳಿತದ ಮೇಲೆ ಗರಿಷ್ಠ ಒತ್ತಡವನ್ನು ಉಳಿಸಿಕೊಳ್ಳಲು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು. ಹಾಗೂ ಭದ್ರತಾ ಮಂಡಳಿಯ ನಿರ್ಣಯಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ರಾಜಕೀಯ ಇಚ್ಛೆಯನ್ನು ಮತ್ತು ಸಂಪನೂ ್ಮಲಗಳನ್ನು ವಿನಿಯೋಗಿಸುವಂತೆ ಕೋರಿದರು. **

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ