ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ

ಮುಂಬೈ/ನವದೆಹಲಿ, ಮಾ.13-ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ ಹೊಸ ಹೊಸ ವಂಚನೆ ಪ್ರಕರಣಗಳನ್ನು ಪತ್ತೆ ಮಾಡುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ನೀಡಲಾಗಿದ್ದ ವಿದೇಶಿ ಪ್ರವಾಸ ಕಾರ್ಡ್ (ಎಫ್‍ಟಿಸಿ) ಬಳಸಿ ಮುಂಬೈನ ವ್ಯಕ್ತಿಯೊಬ್ಬ ಬ್ರಿಟಿಷ್
ಇ-ಕಾಮರ್ಸ್ ವೆಬ್‍ಸೈಟ್‍ಗಳ ಮೇಲೆ 1.41 ದಶಲಕ್ಷ ಡಾಲರ್(9.1 ಕೋಟಿ ರೂ.ಗಳು) ವ್ಯಯಿಸಿ ದೊಡ್ಡ ಅಕ್ರಮ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಚ್ಚರಿಯ ಸಂಗತಿ ಎಂದರೆ ಎಸ್‍ಬಿಐ ಕಾರ್ಡ್‍ನ ಮಿತಿ ಕೇವಲ 200 ಡಾಲರ್‍ಗಳು(13,000 ರೂ.ಗಳು). ಈ ವಂಚನೆ ಪ್ರಕರಣದ ಬಗ್ಗೆ ಎಸ್‍ಬಿಐ ನೀಡಿರುವ ದೂರಿನ ಮೇರೆಗೆ ಸಿಬಿಐ ತನಿಖೆ ತೀವ್ರಗೊಳಿಸಿದೆ.

ನವಿ ಮುಂಬೈನಲ್ಲಿರುವ ತನ್ನ ಎನ್‍ಆರ್‍ಐ ಸೀವುಡ್ಸ್ ಶಾಖೆಯು ಒಂದು ವಿದೇಶಿ ಪ್ರವಾಸ ಕಾರ್ಡ್ ನೀಡಿತ್ತು. ಈ ಸಂಬಂಧ ಯಲಮಂಚಿಲಿ ಸಾಫ್ಟ್‍ವೇರ್ ಎಕ್ಸ್‍ಪೆÇೀಟ್ರ್ಸ್ ಲಿಮಿಟೆಡ್ ಪೂರ್ವ ಪಾವತಿ ಅರ್ಜಿ ಒದಗಿಸಿತ್ತು ಹಾಗೂ ಎಂಫಸಿಸ್ ಸಂಸ್ಥೆ ಡಾಟಾಬೇಸ್ ಬೆಂಬಲ ಸಂಪನ್ಮೂಲ ಪೂರೈಸಿತ್ತು. ಫೆ.28ರಂದು ಯಚಮಂಚಿಲಿ ಸಾಫ್ಟ್‍ವೇರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ಯಾಂಕ್‍ಗೆ ಈ ವಂಚನೆ ಬಗ್ಗೆ ದೂರು ನೀಡಿದ್ದಾರೆ ಎಂದು ಎಸ್‍ಬಿಐ ತಿಳಿಸಿದೆ.

ಒಬ್ಬ ವ್ಯಕ್ತಿಗೆ ಸೇರಿದ ಮೂರು ಕಾರ್ಡ್‍ಗಳ ದೃಢೀಕರಣಕ್ಕಾಗಿ ಫ್ರಿಪೇಯ್ಡ್ ಕಾರ್ಡ್ ವ್ಯವಸ್ಥೆಯನ್ನು ಮೋಸದಿಂದ ಮಾರ್ಪಡಿಸಿರುವುದು ಬ್ಯಾಲೆನ್ಸ್ ವಹಿವಾಟಿನಿಂದ ಪತ್ತೆಯಾಯಿತು. ನಾಲ್ಕು ಬ್ರಿಟಿಷ್ ಕಂಪನಿಗಳ ಇ-ಕಾಮರ್ಸ್ ವೆಬ್‍ಸೈಟ್‍ಗಳಲ್ಲಿ ಅಕ್ರಮವಾಗಿ 374 ವಹಿವಾಟುಗಳನ್ನು ನಡೆಸಿ 9.1 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾರ್ಡ್ ಮಿತಿ ಕೇವಲ 13,000 ರೂ.ಗಳಿದ್ದರೂ ಮೂರು ತಿಂಗಳ ಅವಧಿಯಲ್ಲಿ ಈ ಅಕ್ರಮ ವಹಿವಾಟುಗಳನ್ನು ನಡೆಸಿ ವಂಚಿಸಲಾಗಿದೆ. ಕಾರ್ಡ್ ನೀಡಿಕೆಯಲ್ಲಿ ಆಗಿರುವ ದೋಷದಿಂದ (ಕಾರ್ಡ್‍ದಾರರಿಗೆ ಎರಡು ಹೆಚ್ಚುವರಿ ಕಾರ್ಡ್‍ಗಳ ವಿತರಣೆ) ಈ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

ಸಂದೀಪ್ ಕುಮಾರ್ ರಘು ಪೂಜಾರಿ ಎಂಬ ವ್ಯಕ್ತಿ ಈ ಕಾರ್ಡ್‍ಗಳನ್ನು ಪಡೆದಿದ್ದು, ಅತ್ಯಂತ ಚಾಲಕಿತನದಿಂದ ವಂಚನೆ ಎಸಗಿದ್ದಾನೆ. ಈ ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿರುವ ಸಿಬಿಐ ಪ್ರಕರಣದಲ್ಲಿ ಮತ್ತಷ್ಟು ಮಂದಿ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ