ಛತ್ತೀಸಗಡ್ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರಿಂದ ಸಿಅರ್‍ಪಿಎಪ್ ಮೇಲೆ ದಾಳಿ

ಛತ್ತೀಸಗಡ್: ಮಾರ್ಚ್-13 : ಸುಕ್ಮಾ ಜಿಲ್ಲೆಯ ಕಿಸ್ತಾರಾಮ ಎಂಬ ಪ್ರದೇಶದಲ್ಲಿ ಸಿಅರ್‍ಪಿಎಪ್ ಕಾರ್ಯಾಚರಣೆ ನೆಡೆಸುತ್ತಿದ್ದಾಗ 100 ಕ್ಕೂ ಹೆಚ್ಚು
ನಕ್ಸಲರಿಂದ ಸಿಅರ್‍ಪಿಎಪ್ ತಂಡದ ಮೇಳೆ ದಾಳಿ ನೆಡೆಸಿತು. ಈ ಘಟನೆಯಲ್ಲಿ ಸಿಅರ್‍ಪಿಎಪ್‍ನ 9 ಮಂದಿ ಹುತಾತ್ಮರಾಗಿದ್ದಾರೆ, 6 ಮಂದಿಗೆ ಭೀಕರ ಗಾಯಗಳಾಗಿವೆ ಇವರಲ್ಲಿ ನಾಲ್ವರ ಸ್ಥಿತಿ ಗಂಭಿರವಾಗಿದೆ, ಗಾಯಗೊಂಡವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನೆಡೆದ ಸ್ಥಳ ಛತ್ತೀಸ್ಗಡ್ ರಾಜದಾನಿ ರಾಯ್ಪುರ್ ನಿಂದ 500 ಕಿಮೀ ದೂರದಲ್ಲಿದೆ, ಗಾಯಾಳುಗಳನ್ನು ಘಟನೆ ನೆಡೆದ ಸ್ಥಳದಿಂದ ಏರ್‍ಲಿಪ್ಟ್ ಮೂಲಕ ರಾಯ್ಪುರದ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 8 ಘಂಟೆಗೆ ನಕ್ಸಲರು ಸಿಅರ್‍ಪಿಎಪ್ ನಡುವೆ ಚಕುಮುಕಿ
ಆರಂಭವಾಯಿತು, ಮದ್ಯಾಹ್ನ 12.30ರ ವೇಳೆಗೆ 212 ಬೆಟಾಲಿಯನ್ ಮೇಲೆ ದಾಳಿ ನೆಡೆಸಿತು, ಹಠಾತ್ ದಾಳಿಯಿಂದ 9 ಮಂದಿ ಸಾವು ಮತ್ತು 6 ಮಂದಿಗೆ ಗಂಭೀರ ಗಾಯಗಳಾದವು. ಈ ಘಟನೆಯನ್ನು ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹಲ್ ಗಾಂಧಿ, ಛತ್ತೀಸ್ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ ಘಟನೆಯಲ್ಲಿ ಹುತಾತ್ಮರಾದ ಸಿಅರ್‍ಪಿಎಪ್ ಪೇದೆಗಳ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ