ಛತ್ತೀಸಗಡ್: ಮಾರ್ಚ್-13 : ಸುಕ್ಮಾ ಜಿಲ್ಲೆಯ ಕಿಸ್ತಾರಾಮ ಎಂಬ ಪ್ರದೇಶದಲ್ಲಿ ಸಿಅರ್ಪಿಎಪ್ ಕಾರ್ಯಾಚರಣೆ ನೆಡೆಸುತ್ತಿದ್ದಾಗ 100 ಕ್ಕೂ ಹೆಚ್ಚು
ನಕ್ಸಲರಿಂದ ಸಿಅರ್ಪಿಎಪ್ ತಂಡದ ಮೇಳೆ ದಾಳಿ ನೆಡೆಸಿತು. ಈ ಘಟನೆಯಲ್ಲಿ ಸಿಅರ್ಪಿಎಪ್ನ 9 ಮಂದಿ ಹುತಾತ್ಮರಾಗಿದ್ದಾರೆ, 6 ಮಂದಿಗೆ ಭೀಕರ ಗಾಯಗಳಾಗಿವೆ ಇವರಲ್ಲಿ ನಾಲ್ವರ ಸ್ಥಿತಿ ಗಂಭಿರವಾಗಿದೆ, ಗಾಯಗೊಂಡವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನೆಡೆದ ಸ್ಥಳ ಛತ್ತೀಸ್ಗಡ್ ರಾಜದಾನಿ ರಾಯ್ಪುರ್ ನಿಂದ 500 ಕಿಮೀ ದೂರದಲ್ಲಿದೆ, ಗಾಯಾಳುಗಳನ್ನು ಘಟನೆ ನೆಡೆದ ಸ್ಥಳದಿಂದ ಏರ್ಲಿಪ್ಟ್ ಮೂಲಕ ರಾಯ್ಪುರದ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 8 ಘಂಟೆಗೆ ನಕ್ಸಲರು ಸಿಅರ್ಪಿಎಪ್ ನಡುವೆ ಚಕುಮುಕಿ
ಆರಂಭವಾಯಿತು, ಮದ್ಯಾಹ್ನ 12.30ರ ವೇಳೆಗೆ 212 ಬೆಟಾಲಿಯನ್ ಮೇಲೆ ದಾಳಿ ನೆಡೆಸಿತು, ಹಠಾತ್ ದಾಳಿಯಿಂದ 9 ಮಂದಿ ಸಾವು ಮತ್ತು 6 ಮಂದಿಗೆ ಗಂಭೀರ ಗಾಯಗಳಾದವು. ಈ ಘಟನೆಯನ್ನು ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹಲ್ ಗಾಂಧಿ, ಛತ್ತೀಸ್ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ ಘಟನೆಯಲ್ಲಿ ಹುತಾತ್ಮರಾದ ಸಿಅರ್ಪಿಎಪ್ ಪೇದೆಗಳ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.