ಆಫ್ಘಾನಿಸ್ತಾನದ ಕ್ರೂರಿ ತಾಲಿಬಾನ್ ಉಗ್ರರು ಡಾಂಕಿ ಬಾಂಬ್‍ಗಳನ್ನು ಬಳಸುತ್ತಿರುವ ಆತಂಕಕಾರಿ ಸಂಗತಿ ವರದಿಯಾಗಿದೆ

Nepal, Mustang. Pack ponies carrying bags and supplies between Lo Manthang and Dhi.

ಕಾಬುಲ್, ಮಾ.13-ಮಾನವ ಬಾಂಬ್, ಕಾರ್ ಬಾಂಬ್ ಹಾಗೂ ಟ್ರಕ್ ಬಾಂಬ್‍ಗಳನ್ನು ನಾವು ಕೇಳಿದ್ದೇವೆ. ಆದರೆ ಆಫ್ಘಾನಿಸ್ತಾನದ ಕ್ರೂರಿ ತಾಲಿಬಾನ್ ಉಗ್ರರು ಡಾಂಕಿ ಬಾಂಬ್‍ಗಳನ್ನು ಬಳಸುತ್ತಿರುವ ಆತಂಕಕಾರಿ ಸಂಗತಿ ವರದಿಯಾಗಿದೆ.

ಕತ್ತೆ ಬೆನ್ನಿಗೆ ಬಾಂಬ್‍ಗಳನ್ನು ಇಟ್ಟು ಭದ್ರತಾಪಡೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವ ಪ್ರಕರಣ ಆಫ್ಘನ್‍ನಲ್ಲಿ ನಡೆಯುತ್ತಿದ್ದು, ಇಂಥ ಒಂದು ಡಾಂಕಿ ಬಾಂಬ್ ಅಟ್ಯಾಕ್‍ನಲ್ಲಿ ಇಬ್ಬರು ಪೆÇಲೀಸರೂ ಸೇರಿದಂತೆ ಕೆಲವರು ತೀವ್ರ ಗಾಯಗೊಂಡಿದ್ದಾರೆ.

ಪಾಕಿಸ್ತಾನ ಗಡಿ ಸಮೀಪದ ಕುನರ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದೆ. ಕತ್ತೆಯೊಂದಕ್ಕೆ ಸ್ಫೋಟಕಗಳ ಹೊರೆ ಹಾಕಿ ಭದ್ರತಾ ತಪಾಸಣೆ ಠಾಣ್ಯದ ಬಳಿ ಅದನ್ನು ಕಳುಹಿಸಿ ವಿಧ್ವಂಸಕ ಕೃತ್ಯ ಎಸಗಲಾಗಿದೆ. ಕತ್ತೆ ಚೆಕ್‍ಪೆÇೀಸ್ಟ್ ಬಳಿ ಬರುತ್ತಿದ್ದಂತೆ ರಿಮೋಟ್ ಕಂಟ್ರೋಲ್‍ನಿಂದ ಸ್ಫೋಟಿಸಿ ಪೆÇಲೀಸರೂ ಸೇರಿದಂತೆ ಕೆಲವರನ್ನು ಗಾಯಗೊಳಿಸಲಾಗಿದೆ. ಈ ಘಟನೆಯಲ್ಲಿ ಕತ್ತೆ ಛಿಧ್ರ ಛಿದ್ರವಾಗಿದೆ. ಮಾನವ ಬಾಂಬ್ ದಾಳಿ ಮೂಲಕ ಉಗ್ರರು ಬಲಿಯಾಗುವ ಬದಲು ಮುಗ್ಧ ಪ್ರಾಣಿಗಳನ್ನು ಇದಕ್ಕಾಗಿ ಬಳಸುವ ಕ್ರೂರ ವಿಧಾನ ಆಫ್ಘನ್‍ನ ಕೆಲವೆಡೆ ನಡೆದಿದ್ದು, ಭದ್ರತಾ ಪಡೆಗಳಲ್ಲಿ ಆತಂಕ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ